ಜಾರ್ಖಂಡ್: ನಕ್ಸಲರಿಂದ ಐಐಡಿ ಸ್ಪೋಟ, ಅರ್ಜುನ್‌ ಮುಂಡಾ ಚುನಾವಣಾ ಕಚೇರಿಗೆ ಹಾನಿ

ಖರ್‌ಸವಾನ್‌: ಜಾರ್ಖಂಡ್ ನ ಸರೈಕೆಲಾ ಜಿಲ್ಲೆಯ ಖರ್‌ಸವಾನ್‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕುಂತಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅರ್ಜುನ್‌ ಮುಂಡಾ ಅವರ ಚುನಾವಣಾ ಕಚೇರಿಯನ್ನು....
ನಕ್ಸಲರಿಂದ ಐಐಡಿ ಸ್ಪೋಟ, ಅರ್ಜುನ್‌ ಮುಂಡಾ ಚುನಾವಣಾ ಕಚೇರಿಗೆ ಹಾನಿ
ನಕ್ಸಲರಿಂದ ಐಐಡಿ ಸ್ಪೋಟ, ಅರ್ಜುನ್‌ ಮುಂಡಾ ಚುನಾವಣಾ ಕಚೇರಿಗೆ ಹಾನಿ
Updated on
ಸರೈಕೆಲಾ-ಖರ್‌ಸವಾನ್‌: ಜಾರ್ಖಂಡ್ ನ ಸರೈಕೆಲಾ ಜಿಲ್ಲೆಯ ಖರ್‌ಸವಾನ್‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕುಂತಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅರ್ಜುನ್‌ ಮುಂಡಾ ಅವರ ಚುನಾವಣಾ ಕಚೇರಿಯನ್ನು ಶಂಕಿತ ನಕ್ಸಲರು ಸುಧಾರಿತ ಸ್ಫೋಟಕ ಸಾಧನ(ಐಇಡಿ) ಸ್ಫೋಟಿಸಿ ಹಾನಿಗೊಳಿಸಿದ್ದಾರೆ. 
ಇಂದು ಮಧ್ಯರಾತ್ರಿ ಶಂಕಿತ ನಾಲ್ವರು ನಕ್ಸಲರು ಚುನಾವಣಾ ಕಚೇರಿಯಲ್ಲಿ ಮಲಗಿದ್ದ ನಾಲ್ವರು ಚಾಲಕರನ್ನು ಬಲವಂತವಾಗಿ ಹೊರಗೆ ಕಳುಹಿಸಿ ಐಇಡಿಯಿಂದ ಕಟ್ಟಡವನ್ನು ಸ್ಫೋಟಿಸಿದ್ದಾರೆ. ಸ್ಫೋಟದಿಂದ ಕಟ್ಟಡದ ಗೋಡೆಯೊಂದು ಹಾನಿಗೊಂಡಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚಂದನ್‌ ಕುಮಾರ್ ಶರ್ಮಾ ತಿಳಿಸಿದ್ದಾರೆ. 
ಘಟನೆ ನಡೆದ ಸ್ಥಳದಲ್ಲಿ 100 ಮೀಟರ್ ಉದ್ದದ ತಂತಿ ಹಾಗೂ ಸ್ಫೋಟಕ ಮತ್ತು ನಕ್ಸಲರ ಬಿತ್ತಿಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 
ಘಟನೆ ನಡೆದ ಇಡೀ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
ಮಾಜಿ ಮುಖ್ಯಮಂತ್ರಿ ಅರ್ಜುನ್‌ ಮುಂಡಾ ಈ ಹಿಂದೆ ಜಮ್‌ಶೆಡ್‌ಪುರ ಲೋಕಸಭಾ ಕ್ಷೇತ್ರದಿಂದ ಆಯ್ಕೆಗೊಂಡಿದ್ದರು. ಈಗ ಕುಂತಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com