ಫೋನಿ ಅಬ್ಬರಕ್ಕೆ 8 ಜನ ಸಾವು; ವಿದ್ಯುತ್ ಪೂರೈಕೆ ಸವಾಲಿನ ಸಂಗತಿ: ಸಿಎಂ ಪಟ್ನಾಯಕ್

ಒಡಿಶಾಗೆ ಅಪ್ಪಳಿಸಿರುವ ಫೋನಿ ಚಂಡಮಾರುತ 8 ಜನರನ್ನು ಬಲಿಪಡೆದಿದೆ.
ಫೋನಿ ಅಬ್ಬರಕ್ಕೆ 8 ಜನ ಸಾವು; ವಿದ್ಯುತ್ ಪೂರೈಕೆ ಸವಾಲಿನ ಸಂಗತಿ- ಸಿಎಂ ಪಟ್ನಾಯಕ್
ಫೋನಿ ಅಬ್ಬರಕ್ಕೆ 8 ಜನ ಸಾವು; ವಿದ್ಯುತ್ ಪೂರೈಕೆ ಸವಾಲಿನ ಸಂಗತಿ- ಸಿಎಂ ಪಟ್ನಾಯಕ್
Updated on
ಭುವನೇಶ್ವರ್: ಒಡಿಶಾಗೆ ಅಪ್ಪಳಿಸಿರುವ ಫೋನಿ ಚಂಡಮಾರುತ 8 ಜನರನ್ನು ಬಲಿಪಡೆದಿದೆ. 
ಒಡಿಶಾದ ಪುರಿಗೆ ಬೆಳಿಗ್ಗೆ 8 ಗಂಟೆಗೆ ಅಪ್ಪಳಿಸಿದ ಚಂಡಮಾರುತದಿಂದ ಅವಘಡಗಳು ಸಂಭವಿಸಿದ್ದು, ಮನೆಗಳು, ಗುಡಿಸಲುಗಳು ಕೊಚ್ಚಿಹೋಗಿವೆ. 
ಫೋನಿ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 3 ರಿಂದ 8 ಕ್ಕೆ ಏರಿಕೆಯಾಗಿದೆ. 
ಪುರಿ ಜಿಲ್ಲೆಯಲ್ಲಿ 3, ಭುವನೇಶ್ವರ್ ಪ್ರದೇಶದಲ್ಲಿ 3 ಕೇಂದ್ರಪಾರ  ಪ್ರದೇಶದಲ್ಲಿ ಪುನರ್ವಸತಿ ಕೇಂದ್ರದಲ್ಲಿ ಓರ್ವ ಹಿರಿಯ ಮಹಿಳೆ ಹಾರ್ಟ್ ಅಟ್ಯಾಕ್ ನಿಂದ ಸಾವನ್ನಪ್ಪಿದ್ದಾರೆ. 
ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪುರಿಯಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಇಂಧನ ಮೂಲಸೌಕರ್ಯ ಸಂಪೂರ್ಣವಾಗಿ ನಾಶವಾಗಿದೆ, ವಿದ್ಯುತ್ ಸರಬರಾಜು ಸವಾಲಿನ ಸಂಗತಿಗಳಾಗಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com