ಭಾರತೀಯ ಸೇನೆಗೆ ಆನೆ ಬಲ, ನೌಕಾದಳಕ್ಕೆ ಮತ್ತೊಂದು ಸ್ಕಾರ್ಪಿಯನ್ ಜಲಾಂತರ್ಗಾಮಿ ಸೇರ್ಪಡೆ

ಭಾರತೀಯ ನೌಕಾದಳದ ಬಲ ಮತ್ತಷ್ಟು ವೃದ್ಧಿಸಿದ್ದು, ಇಂದು ಸ್ಕಾರ್ಪಿಯನ್ ಕ್ಲಾಸ್ ಸಬ್ ಮೆರಿನ್ ವೇಲಾ ಅಧಿಕೃತವಾಗಿ ಭಾರತೀಯ ನೌಕಾದಳಕ್ಕೆ ಸೇರ್ಪಡೆಯಾಗಿದೆ.
ಸ್ಕಾರ್ಪಿಯನ್ ಜಲಾಂತರ್ಗಾಮಿ ಸೇರ್ಪಡೆ
ಸ್ಕಾರ್ಪಿಯನ್ ಜಲಾಂತರ್ಗಾಮಿ ಸೇರ್ಪಡೆ
ಮುಂಬೈ: ಭಾರತೀಯ ನೌಕಾದಳದ ಬಲ ಮತ್ತಷ್ಟು ವೃದ್ಧಿಸಿದ್ದು, ಇಂದು ಸ್ಕಾರ್ಪಿಯನ್ ಕ್ಲಾಸ್ ಸಬ್ ಮೆರಿನ್ ವೇಲಾ ಅಧಿಕೃತವಾಗಿ ಭಾರತೀಯ ನೌಕಾದಳಕ್ಕೆ ಸೇರ್ಪಡೆಯಾಗಿದೆ.
ಮುಂಬೈನ ಮಡಗಾಂವ್ ಡಾಕ್ ಲಿಮಿಟೆಡ್ ನಲ್ಲಿ ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ಸ್ಕಾರ್ಪಿಯನ್ ಕ್ಲಾಸ್ ಸಬ್ ಮೆರಿನ್ ವೇಲಾವನ್ನು ಅಧಿಕೃತವಾಗಿ ನೌಕಾದಳಕ್ಕೆ ಸೇರಿಸಲಾಯಿತು. ಇದು ನೌಕಾದಳಕ್ಕೆ ಸೇರ್ಪಡೆಯಾದ ಸ್ಕಾರ್ಪಿಯನ್ ಕ್ಲಾಸ್ ಸರಣಿಯ ನಾಲ್ಕನೇ ಜಲಾಂತರ್ಗಾಮಿ ನೌಕೆಯಾಗಿದೆ.
ಈ ಹಿಂದೆ ಇದೇ ಸರಣಿಯ ಮೂರು ಜಲಾಂತರ್ಗಾಮಿ ನೌಕೆಗಳನ್ನು ಸೇನೆಗೆ ಸೇರ್ಪಡೆಗೊಳಿಸಲಾಗಿತ್ತು. ಸ್ಕಾರ್ಪಿಯನ್ ನೌಕೆಗಳು ಸಂಪೂರ್ಣ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ನೌಕೆಗಳಾಗಿದ್ದು, ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಈ ನೌಕೆಗಳನ್ನು ಮುಂಬೈನ ಮಡಗಾಂವ್ ಡಾಕ್ ಲಿಮಿಟೆಡ್ ನಲ್ಲಿ ತಯಾರು ಮಾಡಲಾಗಿತ್ತು. ಈ ಹಿಂದೆ ಇದೇ ಸ್ಕಾರ್ಪಿಯನ್ ಸರಣಿಯ ಮೊದಲ ಜಲಾಂತರ್ಗಾಮಿ ನೌಕೆ ಐಎನ್ ಎಸ್ ಕಲ್ವರಿ, ಕಳೆದ ಸೆಪ್ಚೆಂಬರ್ ನಲ್ಲಿ ಸೇನೆಗೆ  ಸೇರ್ಪಡೆಯಾಗಿತ್ತು. ಇದರ ಬೆನ್ನಲ್ಲೇ ೨ನೇ ಜಲಾಂತರ್ಗಾಮಿ ನೌಕೆಯಾದ ಐಎನ್‌ಎಸ್ ಕಂದೇರಿ ಡಿಸೆಂಬರ್‌ನಲ್ಲಿ ನೌಕಾಪಡೆಯನ್ನು ಸೇರ್ಪಡೆಗೊಂಡಿತ್ತು. ಆ ಬಳಿಕ 2018 ಜನವರಿಯಲ್ಲಿ ಕಾರಂಜ್ ನೌಕೆಯನ್ನು ಸೇನೆಗೆ ಸೇರ್ಪಡೆ ಮಾಡಲಾಗಿತ್ತು. 
ಜಲಾಂತರ್ಗಾಮಿ ಯೋಜನೆ 75ರ ಅಡಿಯಲ್ಲಿ ಕೇಂದ್ರ ಸರ್ಕಾರ ಒಟ್ಟು 6 ಸ್ಕಾರ್ಪಿಯನ್ ಜಲಾಂತರ್ಗಾಮಿ ನೌಕೆಗಳ ನಿರ್ಮಾಣಕ್ಕೆ 2005ರ ಅಕ್ಟೋಬರ್‌ ನಲ್ಲಿ  ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆ 30 ವರ್ಷಗಳ ಈ  ಯೋಜನೆಗೆ 1999ರಲ್ಲಿ ಸಂಪುಟ ಸಮಿತಿಯು ಒಪ್ಪಿಗೆ ನೀಡಿತ್ತು. ಡಿಸಿಎಸ್‌ಎಸ್ ಆಫ್ ಫ್ರಾನ್ಸ್ ಸಹಯೋಗದಲ್ಲಿ ಮುಂಬೈನ ಮಡಗಾವ್ ಡಾಕ್ ಶಿಪ್ ಯಾರ್ಡ್‌ ನಲ್ಲಿ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. 2020ರ ವೇಳೆಗೆ  ಭಾರತೀಯ ನೌಕಾ ಪಡೆಯು ಒಟ್ಟು 24 ಆಧುನಿಕ  ಸಬ್‌ ಮರೀನ್‌ಗಳನ್ನು ಹೊಂದಿರಲಿದೆ ಎಂದು ಸೇನಾ ಮೂಲಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com