ಐಎನ್ಎಸ್ ಸುಮಿತ್ರಾದಲ್ಲಿ ಕೆನಡಾ ಪ್ರಜೆ ಅಕ್ಷಯ್ ಏಕೆ? ಮತ್ತೆ ಪ್ರಧಾನಿ ಮೋದಿ ಕಾಲೆಳೆದ ರಮ್ಯಾ

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯನ್ನು ಹಿಟ್ಲರ್ ಗೆ ಹೋಲಿಸಿ ನೆಟ್ಟಿಗರಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್ ಸಾಮಾಜಿಕ ತಾಣ ವಿಭಾಗದ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಈಗ ಮತ್ತೊಮ್ಮೆ ಇದೇ ರೀತಿ ಟ್ವೀಟ್ ಮಾಡಿ ಸುದ್ದಿಯಾಗಿದ್ದಾರೆ.
ಐಎನ್ಎಸ್ ಸುಮಿತ್ರಾದಲ್ಲಿ ಕೆನಡಾ ಪ್ರಜೆ ಅಕ್ಷಯ್ ಏಕೆ? ಮತ್ತೆ ಪ್ರಧಾನಿ ಮೋದಿ ಕಾಲೆಳೆದ ರಮ್ಯಾ
ಐಎನ್ಎಸ್ ಸುಮಿತ್ರಾದಲ್ಲಿ ಕೆನಡಾ ಪ್ರಜೆ ಅಕ್ಷಯ್ ಏಕೆ? ಮತ್ತೆ ಪ್ರಧಾನಿ ಮೋದಿ ಕಾಲೆಳೆದ ರಮ್ಯಾ
ನವದೆಹಲಿ: ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯನ್ನು ಹಿಟ್ಲರ್ ಗೆ ಹೋಲಿಸಿ ನೆಟ್ಟಿಗರಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್ ಸಾಮಾಜಿಕ ತಾಣ ವಿಭಾಗದ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಈಗ ಮತ್ತೊಮ್ಮೆ ಇದೇ ರೀತಿ ಟ್ವೀಟ್ ಮಾಡಿ ಸುದ್ದಿಯಾಗಿದ್ದಾರೆ. 
ಭಾರತೀಯ ನೌಕಾಪಡೆಯ ಯುದ್ಧನೌಕೆಗಳನ್ನು ವೈಯುಕ್ತಿಕ ಟ್ಯಾಕ್ಸಿಯಂತೆ ರಾಜೀವ್ ಗಾಂಧಿ ಬಳಸುತ್ತಿದ್ದರೆಂಬ ಮೋದಿ ಟೀಕೆಗೆ ಪ್ರತಿಯಾಗಿ ರಮ್ಯಾ ಭಾರತೀಯ ಯುದ್ಧ ನೌಕೆ ಐಎನ್ಎಸ್ ಸುಮಿತ್ರಾದಲ್ಲಿ ಕೆನಡಾ ಪ್ರಜೆಯಾದ ಅಕ್ಷಯ್ ಕುಮಾರ್ ಜತೆಗೆ ಮೋದಿ ಕಾಣಿಸಿಕೊಂಡಿದ್ದನ್ನು ಪ್ರಶ್ನಿಸಿದ್ದಾರೆ. 
ಕೆನಡಾ ನಾಗರಿಕರಾದ ಅಕ್ಷಯ್ ಕುಮಾರ್ ಅವರನ್ನು ಯುದ್ಧನೌಕೆಗೆ ಕರೆದೊಯ್ದದ್ದು ಸರಿಯೆ?ಯುದ್ಧನೌಕೆಯ ಒಳಗೆ ಅಕ್ಷಯ್ ಪತ್ನಿ, ಪುತ್ರರ ಸಮೇತ ಪ್ರವೇಶಿಸಿದ್ದಾರೆ. ಅವರಿಗೆ ಈ ಅವಕಾಶ ಕೊಟ್ಟದ್ದು ನೀವು(ನರೇಂದ್ರ ಮೋದಿ), ಈ ಕ್ರಮ ಎಷ್ಟರ ಮಟ್ಟಿಗೆ ಸರಿ? ಎಂದು ರಮ್ಯಾ ಪ್ರಧಾನಿಗಳ ಕಾಲೆಳೆದಿದ್ದಾರೆ.
ನಡೆದದ್ದೇನು?
2016ರಲ್ಲಿ ವಿಶಾಖಪಟ್ಟಣದಲ್ಲಿ ನಡೆದ ಅಂತಾರಾಷ್ಟ್ರೀಯ ನೌಕಾಪಡೆ ಪುನರಾವಲೋಕನ (ಐಎಫ್‌ಆರ್‌)ದಲ್ಲಿ ಪ್ರಧಾನಿ ಭಾಗವಹಿಸಿದ್ದು ಅವರೊಡನೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಹ ಕುಟುಂಬ ಸಮೇತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆ ವೇಳೆ ನಟ ಅಕ್ಷಯ್ ತಾವು ಕುಟುಂಬದೊಡನೆ ನೌಕಾಪಡೆಯ ಯುದ್ಧನೌಜೆ ಐಎನ್​ಎಸ್​ ಸುಮಿತ್ರಾದ ಮೇಲೆ ಹೋಗಿ ಫೋಟೋ ತೆಗೆದಿದ್ದು ಇದು ನಾಡಿನಾದ್ಯಂತದ ಅಕ್ಷಯ್ ಅಭಿಮಾನಿಗಳಿಗೆ ಸಂತಸ ತಂದಿತ್ತು. ಅವರೆಲ್ಲರೂ ತಮ್ಮ ನೆಚ್ಚಿನ ನಟನ ಭಾವಚಿತ್ರವನ್ನು ಸಾಮಾಜಿಕ ತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಈಗ ರಮ್ಯಾ ಅದೇ ಫೋಟೋ ಬಳಸಿಕೊಂಡು ಪ್ರಧಾನಿ ಮೋದಿ ನಿರ್ಧಾರದ ಕುರಿತು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com