ಯುದ್ಧ ವಿಮಾನದಿಂದ ಬೇರ್ಪಟ್ಟು ಹೊರಟ ಕ್ಷಿಪಣಿ ನಿಗದಿ ಪಡಿಸಿದ್ದ ಗುರಿಯನ್ನು ಕರಾರುವಕ್ಕಾಗಿ ತಲುಪಿದೆ. ಅಂತೆಯೇ ಕ್ಷಿಪಣಿಯ ಈ ಕಾರ್ಯಾಚರಣೆ ತುಂಬಾ ಸುಲಭವಾಗಿತ್ತು ವಾಯುಸೇನೆ ವಕ್ತಾರ ಕ್ಯಾಪ್ಟನ್ ಅನುಪಮ್ ಬ್ಯಾನರ್ಜಿ ಹೇಳಿದ್ದಾರೆ. 2.5 ಟನ್ ತೂಕದ ಈ ಕ್ಷಿಪಣಿ ಇದೀಗ ಆಗಸದಿಂದ ಭೂಮಿ ಮೇಲಿನ ಗುರಿಗಳನ್ನು, ಆಗಸದಿಂದ ಆಗಸದ ಮೇಲಿನ ಗುರಿಗಳನ್ನು ಮತ್ತು ಸಮುದ್ರದಿಂದ ಆಗಸದ ಮೇಲಿನ ಗುರಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಕ್ಷಿಪಣಿ ಹೊಂದಿದಂತಾಗಿದೆ. ಪ್ರಸ್ತುತ ಇಂದು ಪರೀಕ್ಷೆ ನಡೆಸಿದ ಬ್ರಹ್ಮೋಸ್ ಕ್ಷಿಪಣಿ ಸುಮಾರು 300 ಕಿ.ಮೀ ದೂರದ ಗುರಿಗಳನ್ನು ಧ್ವಂಸ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.