ಮೂತ್ರಪಿಂಡ ಕಸಿ: ಹಿಂದೂ ಮಹಿಳೆ, ಮುಸ್ಲಿಂ ವ್ಯಕ್ತಿಗೆ ಮರುಜನ್ಮ!

ರಾಗಾ ದ್ವೇಷಗಳು ಕೇವಲ ಧರ್ಮಗಳ ನಡುವೆ ಮಾತ್ರ. ಆದರೆ ಇಲ್ಲೊಂದು ಮಾನವೀಯ ಧರ್ಮ ಸುದ್ದಿ ಮಾಡಿದೆ. ಹೌದು ಹಿಂದೂ ಮಹಿಳೆ ಹಾಗೂ ಮುಸ್ಲಿಂ ವ್ಯಕ್ತಿಗೆ ಪುನರ್ ಜನ್ಮ ಸಿಕ್ಕಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಚಂಢಿಗಡ್: ರಾಗಾ ದ್ವೇಷಗಳು ಕೇವಲ ಧರ್ಮಗಳ ನಡುವೆ ಮಾತ್ರ. ಆದರೆ ಇಲ್ಲೊಂದು ಮಾನವೀಯ ಧರ್ಮ ಸುದ್ದಿ ಮಾಡಿದೆ. ಹೌದು ಹಿಂದೂ ಮಹಿಳೆ ಹಾಗೂ ಮುಸ್ಲಿಂ ವ್ಯಕ್ತಿಗೆ ಪುನರ್ ಜನ್ಮ ಸಿಕ್ಕಿದೆ.
ಬಿಹಾರ ಮೂಲದ ಹಿಂದೂ ಮಹಿಳೆ ಮಂಜುಳಾ ದೇವಿ ಅವರಿಗೆ ಕಾಶ್ಮೀರ ಮೂಲದ ಮುಸ್ಲಿಂ ಅಬ್ದುಲ್ ಅಜಿಜ್ ಅವರಿಗೂ ಕಿಡ್ನಿ ಕಸಿಯಾಗಬೇಕಿತ್ತು. ಈ ವೇಳೆ ಅಬ್ದುಲ್ ಅಜಿಜ್ ಅವರಿಗೆ ಮಂಜುಳಾ ಅವರ ಪತಿ ಕಿಡ್ನಿ ನೀಡಿದ್ದು, ಮಂಜುಳಾಗೆ ಅಜಿಜ್ ಪತ್ನಿ ಕಿಡ್ನಿ ದಾನ ಮಾಡಿದ್ದು ಎರಡು ಜೀವ ಉಳಿದಿದೆ.
ಡಾ. ಪ್ರಿಯದರ್ಶನ್ ರಂಜನ್ ಅವರು ಕಿಡ್ನಿ ದಾನಿಗಾಗಿ ಮೊಬೈಲ್ ಆ್ಯಪ್ ಸೃಷ್ಟಿಸಿದ್ದರು. ಇದನ್ನು ಗಮನಿಸಿದ ಹಲವರು ಕಿಡ್ನಿ ದಾನ ನೀಡಲು ಮುಂದೆ ಬಂದರು. ಈ ವೇಳೆ 46 ವರ್ಷದ ಪತಿ ಸುರ್ಜಿತ್ ಕುಮಾರ್ ಅವರ ಕಿಡ್ನಿ ಅಜಿಜ್ ಅವರಿಗೆ ಹೊಂದಾಣಿಕೆ ಆಗಿತ್ತು. ಅದೇ ರೀತಿ ಅಜಿಜ್ ಪತ್ನಿ 50 ವರ್ಷದ ಶಾಜಿಯಾ ಅವರ ಕಿಡ್ನಿ ಮಂಜುಳಾ ಅವರಿಗೆ ಹೊಂದಾಣಿಕೆಯಾಗಿದ್ದು ಇಬ್ಬರು ಪರಸ್ಪರ ಕಿಡ್ನಿ ದಾನ ಮಾಡಿ ಪತಿ ಹಾಗೂ ಪತ್ನಿಯನ್ನು ಉಳಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com