ಆಂಧ್ರ: ಕಲಾಮ್ ಪ್ರತಿಭಾ ಪುರಸ್ಕಾರ ಪ್ರಶಸ್ತಿಗೆ ವೈಎಸ್ ಆರ್ ಹೆಸರು: ವಿರೋಧಕ್ಕೆ ಮಣಿದು ನಿರ್ಧಾರ ಬದಲಿಸಿದ ಸಿಎಂ ಜಗನ್ ರೆಡ್ಡಿ 

ಆಂಧ್ರಪ್ರದೇಶದಲ್ಲಿ ವಿದ್ಯಾರ್ಥಿಗಳ ಉತ್ತಮ ಶೈಕ್ಷಣಿಕ ಸಾಧನೆಗೆ ನೀಡಲಾಗುವ ಅಬ್ದುಲ್ ಕಲಾಮ್ ಪ್ರತಿಭಾ ವಿದ್ಯಾ ಪುರಸ್ಕಾರ ಯೋಜನೆಯ ಹೆಸರು ಬದಲಿಸುವ ನಿರ್ಧಾರವನ್ನು ಅಲ್ಲಿನ ಸರ್ಕಾರ ಹಿಂಪಡೆದಿದೆ. 
ಆಂಧ್ರ: ಕಲಾಮ್ ಪ್ರತಿಭಾ ಪುರಸ್ಕಾರ ಪ್ರಶಸ್ತಿಗೆ ವೈಎಸ್ ಆರ್ ಹೆಸರು: ವಿರೋಧಕ್ಕೆ ಮಣಿದಸಿಎಂ ಜಗನ್ ರೆಡ್ಡಿ
ಆಂಧ್ರ: ಕಲಾಮ್ ಪ್ರತಿಭಾ ಪುರಸ್ಕಾರ ಪ್ರಶಸ್ತಿಗೆ ವೈಎಸ್ ಆರ್ ಹೆಸರು: ವಿರೋಧಕ್ಕೆ ಮಣಿದಸಿಎಂ ಜಗನ್ ರೆಡ್ಡಿ

ಹೈದರಾಬಾದ್: ಆಂಧ್ರಪ್ರದೇಶದಲ್ಲಿ ವಿದ್ಯಾರ್ಥಿಗಳ ಉತ್ತಮ ಶೈಕ್ಷಣಿಕ ಸಾಧನೆಗೆ ನೀಡಲಾಗುವ ಅಬ್ದುಲ್ ಕಲಾಮ್ ಪ್ರತಿಭಾ ವಿದ್ಯಾ ಪುರಸ್ಕಾರ ಯೋಜನೆಯ ಹೆಸರು ಬದಲಿಸುವ ನಿರ್ಧಾರವನ್ನು ಅಲ್ಲಿನ ಸರ್ಕಾರ ಹಿಂಪಡೆದಿದೆ. 

ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಯೋಜನೆಗೆ ಅಬ್ದುಲ್ ಕಲಾಮ್ ಅವರ ಹೆಸರಿನ ಬದಲು ಆಂಧ್ರ ಪ್ರದೇಶದ ಮಾಜಿ ಸಿಎಂ ವೈಎಸ್ ರಾಜಶೇಖರ ರೆಡ್ಡಿ ಅವರ ಹೆಸರಿಡಲು ಸಿಎಂ ಜಗನ್ ರೆಡ್ಡಿ ಆದೇಶ ನೀಡಿದ್ದರು. 

ಆದರೆ ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಸರ್ಕಾರ ಆದೇಶದ ವಿರುದ್ಧ ಸಿಡಿದೆದ್ದ ಪರಿಣಾಮ ಸರ್ಕಾರ ತನ್ನ ನಿರ್ಧಾರವನ್ನು ಬದಲಿಸಿ, ಆದೇಶ ಹಿಂಪಡೆದಿದೆ. 

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ತಮ್ಮ ಸ್ಪೂರ್ತಿದಾಯಕ ಜೀವನದ ಮೂಲಕ ದೇಶಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ನೀಡಲಾಗುತ್ತಿದ್ದ ಪ್ರಶಸ್ತಿಗೆ ಸಿಎಂ ಜಗನ್ ಮೋಹನ್ ರೆಡ್ಡಿ ತಮ್ಮ ತಂದೆ ಹೆಸರು ಇಟ್ಟಿದ್ದಾರೆ. ಇದು ಸಿಎಂಗೆ ಶೋಭೆ ತರುವುದಿಲ್ಲ ಎಂದು ಟ್ವೀಟ್ ಮಾಡಿ ಸರ್ಕಾರದ ನಡೆಯನ್ನು ವಿರೋಧಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com