ಸರ್ಕಾರಿ ಕಚೇರಿಯಲ್ಲಿ ಹೆಲ್ಮೇಟ್ ಹಾಕಿಕೊಂಡೆ ಕೆಲಸ ಮಾಡುವ ಸಿಬ್ಬಂದಿ!

ಉತ್ತರ ಪ್ರದೇಶದ ಬಾಂದಾ ಜಿಲ್ಲೆಯ ವಿದ್ಯುತ್ ಇಲಾಖೆಯ ಅನೇಕ ಸಿಬ್ಬಂದಿ ತಲೆಗೆ ಹೆಲ್ಮೇಟ್ ಹಾಕಿಕೊಂಡು ಕೆಲಸ ಮಾಡುವ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಹೆಲ್ಮೇಟ್ ಹಾಕಿರುವ ನೌಕರರು
ಹೆಲ್ಮೇಟ್ ಹಾಕಿರುವ ನೌಕರರು

ಬಾಂದಾ: ಉತ್ತರ ಪ್ರದೇಶದ ಬಾಂದಾ ಜಿಲ್ಲೆಯ ವಿದ್ಯುತ್ ಇಲಾಖೆಯ ಅನೇಕ ಸಿಬ್ಬಂದಿ ತಲೆಗೆ ಹೆಲ್ಮೇಟ್ ಹಾಕಿಕೊಂಡು ಕೆಲಸ ಮಾಡುವ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ವಿದ್ಯುತ್ ಇಲಾಖೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿರುವುದರಿಂದ ಈ ರೀತಿ ಹೆಲ್ಮೇಟ್ ಹಾಕಿಕೊಂಡೆ ಅನೇಕ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

ನೌಕರರು ಕೆಲಸ ಮಾಡುವ ಕಟ್ಟಡ ಮೇಲ್ಛಾವಣಿಯಲ್ಲಿ ಅನೇಕ ಗುಂಡಿಗಳು ಬಿದ್ದಿದ್ದು, ಯಾವಾಗ ಏನಾಗುತ್ತದೆ ಎಂಬುದು ಗೊತ್ತಿಲ್ಲ. ದುರಾದೃಷ್ಟವಶಾತ್ ಏನಾದರೂ ದುರಂತ ಉಂಟಾದಲ್ಲಿ ಜೀವ ರಕ್ಷಣೆ ಹಿನ್ನೆಲೆಯಲ್ಲಿ ಹೆಲ್ಮೇಟ್ ಹಾಕಿಕೊಂಡು ಕೆಲಸ ಮಾಡುವುದಾಗಿ ನೌಕರರು ಹೇಳಿದ್ದಾರೆ.

ಈ ಕುರಿತು ಅನೇಕ ಬಾರಿ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ದುರಸ್ಥಿ ಆರಂಭಿಸುವ ಮುನ್ನ ನಮ್ಮಲ್ಲಿಯೇ ಯಾರಾದರೂ ಒಬ್ಬಲಿ ಸಾಯಲಿ  ಅಂತಾ ಅವರು ಕಾಯುತ್ತಿದ್ದಾರೆ ಎಂದು ನೌಕರನೊಬ್ಬ ಆಕ್ರೋಶ ವ್ಯಕ್ತಪಡಿಸಿದರು. 

ವಿದ್ಯುತ್ ಇಲಾಖೆಯ ಕಟ್ಟಡ ಮಾತ್ರ ಶಿಥಿಲಗೊಂಡಿಲ್ಲ, ಪಿಠೋಪಕರಣಗಳು ಕೂಡಾ ಹಾಳಾಗಿವೆ. ದಾಖಲಾತಿ ಸಂಗ್ರಹಿಸಿಡಲು ಯಾವುದೇ ಡ್ರಾಯರ್ಸ್ , ಕಪ್ ಬೋರ್ಡ್ ಕೂಡಾ ಇಲ್ಲದಂತಾಗಿದೆ. ಆದರೆ, ಈ ಬಗ್ಗೆ ಯಾವೊಬ್ಬ ಹಿರಿಯ ಅಧಿಕಾರಿಯೂ ಪ್ರತಿಕ್ರಿಯೆ ನೀಡಿಲ್ಲ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com