ಪಿಂಚಣಿ ಹಣಕ್ಕಾಗಿ ತಂದೆಯನ್ನ ಕೊಂದ ಪಾಪಿ ಪುತ್ರ! 

ಪಿಂಚಣಿ ಹಣವನ್ನು ನೀಡಲು ನಿರಾಕರಿಸಿದ ತಂದೆಯನ್ನು ಆತನ ಮಗನೇ ಬರ್ಬರವಾಗಿ ಹತ್ಯೆ ಮಾಡಿರುವ ಹೀನ ಕೃತ್ಯ ಪಾಟ್ನಾದ ಬಂಕದಲ್ಲಿ ನಡೆದಿದೆ. 
ಪಿಂಚಣಿ ಹಣಕ್ಕಾಗಿ ತಂದೆಯನ್ನ ಕೊಂದ ಪಾಪಿ ಪುತ್ರ!
ಪಿಂಚಣಿ ಹಣಕ್ಕಾಗಿ ತಂದೆಯನ್ನ ಕೊಂದ ಪಾಪಿ ಪುತ್ರ!
Updated on: 

ಪಿಂಚಣಿ ಹಣವನ್ನು ನೀಡಲು ನಿರಾಕರಿಸಿದ ತಂದೆಯನ್ನು ಆತನ ಮಗನೇ ಬರ್ಬರವಾಗಿ ಹತ್ಯೆ ಮಾಡಿರುವ ಹೀನ ಕೃತ್ಯ ಪಾಟ್ನಾದ ಬಂಕದಲ್ಲಿ ನಡೆದಿದೆ. 

ನಿವೃತ್ತ ರೈಲ್ವೆ ನೌಕರ ಸಿಧೇಶ್ವರ್ ಸೊರೇನ್ (65) ಹತ್ಯೆಯಾದ ದುರ್ದೈವಿ.  ಪೊಲೀಸರು ಕೊಲೆಗಡುಕ ಪುತ್ರ ಮಹೇಂದ್ರ ಸೊರೇನ್ (23) ನ್ನು ಬಂಧಿಸಿದ್ದು ಜೈಲಿಗೆ ಕಳಿಸಿದ್ದಾರೆ. 

ಸಿಧೇಶ್ವರ್ ಸೊರೇನ್ ಅವರ ಹಿರಿಯ ಪುತ್ರ  ರಣ್ಧೀರ್(28) ತಮ್ಮ ಮಾವನ ಮನೆಗೆ ತೆರಳಿದ್ದಾಗ ಈ ಘಟನೆ ನಡೆದಿದೆ.  ಸಿಧೇಶ್ವರ್ ಸೊರೇನ್ ಅವರು ಬ್ಯಾಂಕ್ ನಿಂದ ಪಿಂಚಣಿ ಹಣವನ್ನು ತೆಗೆದುಕೊಂಡುಬಂದಿದ್ದರು. ಇದನ್ನು ಗಮನಿಸಿದ್ದ ಪುತ್ರ ಮಹೇಂದ್ರ ಸೊರೇನ್ ಹಣ ನೀಡುವಂತೆ ಕೇಳಿದ್ದಾನೆ. ಪಿಂಚಣಿ ಹಣವನ್ನು ನೀಡಲು ನಿರಾಕರಿಸಿದ್ದರಿಂದ ಕೋಪಗೊಂಡ ಮಗ ತಂದೆಯ ಮೇಲೆ ದೊಣ್ಣೆ, ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ. ತಂದೆಯನ್ನು ಹತ್ಯೆ ಮಾಡುವುದಷ್ಟೇ ಅಲ್ಲದೇ ತಾಯಿಯ ಮೇಲೆಯೂ ಹಲ್ಲೆ ನಡೆಸಿದ್ದಾನೆ. ಕೋಠಡಿಯ ಬಾಗಿಲು ಹಾಕಿಕೊಂಡು ಮಾರಣಾಂತಿಕ ಹಲ್ಲೆ ನಡೆಸಿರುವ ಪರಿಣಾಮ ಆತನ ತಂದೆಗೆ ತೀವ್ರವಾಗಿ ಗಾಯಗಳುಂಟಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com