ಶಿವಸೇನಾ ನಾಯಕರು
ಶಿವಸೇನಾ ನಾಯಕರು

ಸಿಎಂ ಹುದ್ದೆ ಹಂಚಿಕೊಳ್ಳಲು ಸಿದ್ಧರಿದ್ದರೆ ಮಾತ್ರ ನಮ್ಮ ಬಳಿ ಬನ್ನಿ: ಬಿಜೆಪಿಗೆ ಕಡ್ಡಿಮುರಿದಂತೆ ಹೇಳಿದ ಶಿವಸೇನೆ 

ಮುಖ್ಯಮಂತ್ರಿ ಹುದ್ದೆ ಹಂಚಿಕೆ ಮಾಡಲು ಒಪ್ಪುವುದಾದರೆ ನಮ್ಮ ಬಳಿ ಮೈತ್ರಿ ಮಾತುಕತೆಗೆ ಬನ್ನಿ, ಇಲ್ಲವಾದರೆ ಬೇಡ ಎಂದು ಶಿವಸೇನೆ ಶುಕ್ರವಾರ ಮತ್ತೆ ಕಡ್ಡಿ ಮುರಿದಂತೆ ಹೇಳಿದೆ.

ಮುಂಬೈ: ಮುಖ್ಯಮಂತ್ರಿ ಹುದ್ದೆ ಹಂಚಿಕೆ ಮಾಡಲು ಒಪ್ಪುವುದಾದರೆ ನಮ್ಮ ಬಳಿ ಮೈತ್ರಿ ಮಾತುಕತೆಗೆ ಬನ್ನಿ, ಇಲ್ಲವಾದರೆ ಬೇಡ ಎಂದು ಶಿವಸೇನೆ ಶುಕ್ರವಾರ ಮತ್ತೆ ಕಡ್ಡಿ ಮುರಿದಂತೆ ಹೇಳಿದೆ.


ಇಂದು ಸುದ್ದಿಗಾರರರೊಂದಿಗೆ ಮಾತನಾಡಿದ ಸಂಜಯ್ ರಾವತ್, ಸರ್ಕಾರ ರಚನೆ ಸಂಬಂಧ ಈಗಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ಬಿಜೆಪಿ ಉಸ್ತುವಾರಿ ಸರ್ಕಾರದ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಲು ನೋಡಬಾರದು ಎಂದಿದ್ದಾರೆ.


ನಿರ್ಗಮಿತ ಸರ್ಕಾರದ ಅವಧಿ ನಾಳೆಗೆ ಮುಕ್ತಾಯವಾಗಲಿರುವುದರಿಂದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರಾಜೀನಾಮೆ ನೀಡಬೇಕೆಂದು ಕೂಡ ಅವರು ಹೇಳಿದ್ದಾರೆ.


ಬಿಜೆಪಿ ಹಿರಿಯ ನಾಯಕ, ಕೇಂದ್ರ ಸಚಿವ ನಿತಿನ್ ಗಡ್ಕರಿ ಇಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಕುರಿತು ಕೇಳಿದಾಗ, ಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೆ ಮಾಡಲು ಒಪ್ಪುವುದಾದರೆ ಮಾತ್ರ ಬಿಜೆಪಿ ನಮ್ಮಲ್ಲಿಗೆ ಮಾತುಕತೆಗೆ ಬರಲಿ ಎಂದರು.


ಗಡ್ಕರಿಯವರು ಮುಂಬೈಯವರು. ಅವರು ಅವರ ಮನೆಗೆ ಹೋಗಬಹುದು. ನಮ್ಮ ಬಳಿ ಬರುತ್ತಿರುವ ವಿಷಯ ಗೊತ್ತಿಲ್ಲ. ಶಿವಸೇನೆಗೆ ಎರಡೂವರೆ ವರ್ಷ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡುತ್ತೇವೆ ಎಂದು ಪತ್ರ ತರುತ್ತೇನೆ ಎಂದು ನಿಮಗೆ ಹೇಳಿದ್ದಾರಾ ಎಂದು ಪತ್ರಕರ್ತರನ್ನು ಕೇಳಿದರು.

Related Stories

No stories found.

Advertisement

X
Kannada Prabha
www.kannadaprabha.com