ಕಾಲೇಜು ಹುಡುಗಿಯರನ್ನು ಗೋವಾ ಟ್ರಿಪ್ ಗೆ ಕರೆದೊಯ್ದ ಬಸ್ ಚಾಲಕನ ಲೈಸೆನ್ಸ್ ರದ್ದು!

ಕಾಲೇಜ್ ಹುಡುಗಿಯರನ್ನು ಗೋವಾ ಟ್ರಿಪ್ ಗೆ ಕರೆದೊಯ್ದ ಬಸ್ ಚಾಲಕನ ಲೈಸೆನ್ಸ್ ರದ್ದುಗೊಂಡಿರುವ ಘಟನೆ ಕೇರಳದ ವೈನಾಡಿನಲ್ಲಿ ನಡೆದಿದೆ.
ಬಸ್ ಚಾಲಕ ಮತ್ತು ಹುಡುಗಿಯರ ಚಿತ್ರ
ಬಸ್ ಚಾಲಕ ಮತ್ತು ಹುಡುಗಿಯರ ಚಿತ್ರ
Updated on

ವೈನಾಡು:ಕಾಲೇಜ್ ಹುಡುಗಿಯರನ್ನು ಗೋವಾ ಟ್ರಿಪ್ ಗೆ ಕರೆದೊಯ್ದ ಬಸ್ ಚಾಲಕನ ಲೈಸೆನ್ಸ್ ರದ್ದುಗೊಂಡಿರುವ ಘಟನೆ ಕೇರಳದ ವೈನಾಡಿನಲ್ಲಿ ನಡೆದಿದೆ.

ಕಾಲೇಜ್ ಹುಡುಗಿಯರಿಗೆ ಬಸ್ ಗೇರ್ ಚೇಂಜ್ ಮಾಡಲು ಬಿಟ್ಟ ಚಾಲಕ ಇದೀಗ ಆರು ತಿಂಗಳ ಕಾಲ ಲೆಸೆನ್ಸ್ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

ಕಾಲೇಜ್ ಹುಡುಗಿರ ಗುಂಪನ್ನು ಕಂಡ ತಕ್ಷಣ ರೋಮಾಂಚನಗೊಂಡ ಬಸ್ ಚಾಲಕ , ಬಸ್ ಚಲಿಸುತ್ತಿರುವಾಗಲೇ ಗೇರ್ ಬದಲಾಯಿಸಲು ಅವಕಾಶ ನೀಡಿದ್ದಾನೆ.

ಹುಡುಗಿಯರು ಹಲವು ಬಾರಿ ಗೇರ್ ಬದಲಾಯಿಸಿದ್ದಾರೆ. ಈ ಮಧ್ಯೆ ಚಾಲಕ ಕೂಡಾ ಗೇರ್ ಬದಲಾಯಿಸುವ ನೆಪದಲ್ಲಿ ಹುಡುಗಿಯರ ಕೈ ಹಿಡಿದು ಸಂತಸಪಟ್ಟಿದ್ದಾನೆ. ಇದನ್ನು ಹುಡುಗಿಯರು ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆರ್ ಟಿ ಒ ಅಧಿಕಾರಿಗಳ ಕೈಗೂ ಸಿಕ್ಕಿದೆ.

ತಕ್ಷಣ ಕಾರ್ಯಪ್ರವೃತ್ತರಾದ ಆರ್ ಟಿಒ ಅಧಿಕಾರಿಗಳು ಬಸ್ ಚಾಲಕನನ್ನು ಗುರುತಿಸಿದ್ದು, ಅಜಾಗರೂಕತೆಯಿಂದ ಚಾಲನೆ ಕಾರಣಕ್ಕೆ ಪ್ರಕರಣ ದಾಖಲಿಸಿಕೊಂಡು 6 ತಿಂಗಳ ಕಾಲ ಲೆಸೆನ್ಸ್ ರದ್ದು ಮಾಡಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com