ಔರಂಗಾಬಾದ್: ನಾಥುರಾಮ್ ಗೋಡ್ಸೆ ಮಹಾತ್ಮ ಗಾಂಧೀಜಿಯವರನ್ನು ಒಮ್ಮೆ ಹತ್ಯೆ ಮಾಡಿದರೆ, ಭಾರತದ ಆಧುನಿಕ ಗೋಡ್ಸೆಗಳು ಪ್ರತೀನಿತ್ಯ ಕೊಲ್ಲುತ್ತಲೇ ಇದ್ದಾರೆಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಬುಧವಾರ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ನಾಥುರಾಮ್ ಗೋಡ್ಸೆ ಗಾಂಧೀಜಿಯವರನ್ನು ಒಮ್ಮೆ ಹತ್ಯೆ ಮಾಡಿದ್ದರು. ಆದರೆ, ಆಧುನಿಕ ಯುಗದ ಗೋಡ್ಸೆಗಳು ಭಾರತದ ಗಾಂಧಿಗಳನ್ನು ದಿನದ ಆಧಾರದ ಮೇಲೆ ಹತ್ಯೆ ಮಾಡುತ್ತಿದ್ದಾರೆಂದು ಹೇಳಿದ್ದಾರೆ.
ಗಾಂಧೀಜಿಯವರಿಗೆ ಗೋಡ್ಸೆ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಆದರೆ, ಆಧುನಿಕ ಗೋಡ್ಸೆಗಳು ಗಾಂಧೀಯವರ ಹಿಂದೂಸ್ತಾನವನ್ನು ಪ್ರತೀನಿತ್ಯ ಕೊಲ್ಲುತ್ತಿದ್ದಾರೆ. ಗಾಂಧೀಜಿ ಪ್ರೀತಿ ಮಾಡಿದ್ದ ಈ ರಾಷ್ಟ್ರವನ್ನು ರಕ್ಷಣೆ ಮಾಡಿ ಎಂದು ಗಾಂಧೀಜಿಯವರ ಅನುಯಾಯಿಗಳಿಗೆ ಮನವಿ ಮಾಡಿಕೊಳ್ಳುತ್ತೇನೆಂದು ತಿಳಿಸಿದ್ದಾರೆ.
ಇದೇ ವೇಳೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಅವರುಿ, ಮೋದಿ ಹಾಗೂ ಗೃಹ ಸಚಿವರು ಭಾರತದಲ್ಲೆಡೆ ಎನ್ಆರ್'ಸಿ ಮಾಡುತ್ತೇವೆಂದು ಹೇಳುತ್ತಿದ್ದಾರೆ. ಭಾರತದಲ್ಲಿ ಸಂವಿಧಾನವಿದೆ ಎಂಬುದನ್ನು ಅವರು ಮರೆತಂದಿದ್ದಾರೆಂದು ಹೇಳಿದ್ದಾರೆ.
Advertisement