ಕಾಶ್ಮೀರದಲ್ಲಿ ನುಸುಳುಕೋರ ಶಂಕಿತ ಉಗ್ರನ ಬಂಧನ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ಗಡಿಯೊಳಗೆ ನುಸುಳುತ್ತಿದ್ದ ಓರ್ವ ಶಂಕಿತ ಉಗ್ರನನ್ನು ಯೋಧರು ಸೋಮವಾರ ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜಮ್ಮು: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ಗಡಿಯೊಳಗೆ ನುಸುಳುತ್ತಿದ್ದ ಓರ್ವ ಶಂಕಿತ ಉಗ್ರನನ್ನು ಯೋಧರು ಸೋಮವಾರ ಬಂಧಿಸಿದ್ದಾರೆ.

ಪಾಕಿಸ್ತಾನ ಮೂಲದ ನೂರಾರು ಉಗ್ರರು ಭಾರತದ ಗಡಿಯೊಳಗೆ ನುಸುಳಲು ಸಂಚು ರೂಪಿಸಿದ್ದಾರೆ ಎಂಬ ಗುಪ್ತಚರ ಇಲಾಖೆ ಮಾಹಿತಿ ಬೆನ್ನಲ್ಲೇ ಇಂದು ಭಾರತದ ಗಡಿಯೊಳಗೆ ನುಸುಳುತ್ತಿದ್ದ ಓರ್ವ ಶಂಕಿತ ಉಗ್ರನನ್ನು ಬಿಎಸ್ ಎಫ್ ಯೋಧರು ಬಂಧಿಸಿದ್ದಾರೆ.

ಜಮ್ಮುವಿನ ಆರ್ ಎಸ್ ಪುರ (ರಣ್ ಬೀರ್ ಸಿಂಗ್ ಪುರ)ಸೆಕ್ಟರ್ ನಲ್ಲಿ ಯೋಧರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ಬಂಧಿತನನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ.

ಈ ವೇಳೆ ಆತ ತನ್ನ ಹೆಸರು ಹುಸೇನ್ ಫಾರೂಕ್ ಎಂದು ಹೇಳಿಕೊಂಡಿದ್ದು, ಆತ ಸಿಯಾಲ್ ಕೋಟ್ ನಿವಾಸಿ ಎಂದು ಹೇಳಿಕೊಂಡಿದ್ದಾನೆ. ಪ್ರಸ್ತುತ ಆತನನ್ನು ವಶಕ್ಕೆ ಪಡೆದಿರುವ ಬಿಎಸ್ ಎಫ್ ಯೋಧರು ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com