64ನೇ ದಿನಕ್ಕೆ ಕಾಲಿಟ್ಟ ಕಾಶ್ಮೀರ ಪ್ರತಿಭಟನೆ; ಮೂಲಭೂತ ಸೌಕರ್ಯ ಸ್ಥಗಿತ 

ಜಮ್ಮು ಕಾಶ್ಮೀರದಲ್ಲಿ 370ನೇ ರದ್ದತಿ ವಿರೋಧಿಸಿ ಆರಂಭವಾದ ಪ್ರತಿಭಟನೆ 64ನೇ ದಿನಕ್ಕೆ ಕಾಲಿಟ್ಟಿದ್ದು, ರೈಲು, ಮೊಬೈಲ್ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ 370ನೇ ರದ್ದತಿ ವಿರೋಧಿಸಿ ಆರಂಭವಾದ ಪ್ರತಿಭಟನೆ 64ನೇ ದಿನಕ್ಕೆ ಕಾಲಿಟ್ಟಿದ್ದು, ರೈಲು, ಮೊಬೈಲ್ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.


ಕಳೆದ 24 ಗಂಟೆಗಳ ಅವಧಿಯಲ್ಲಿ ಕಾಶ್ಮೀರ ಕಣಿವೆಯಲ್ಲಿ ಯಾವುದೇ ದೊಡ್ಡ ಅಹಿತಕರ ಘಟನೆ ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ಕಣಿವೆಯ ಯಾವುದೇ ಭಾಗದಲ್ಲಿ ಕರ್ಫ್ಯೂ ನಿರ್ಬಂಧವಿರಲಿಲ್ಲ. ಆದಾಗ್ಯೂ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಮುನ್ನೆಚ್ಚರಿಕೆ ಕ್ರಮವಾಗಿ ಸೆಕ್ಷನ್ 144 ಸಿಆರ್‌ಪಿಸಿ ಅಡಿಯಲ್ಲಿ ನಿರ್ಬಂಧಗಳು, ನಾಲ್ಕು ಅಥವಾ ಹೆಚ್ಚಿನ ವ್ಯಕ್ತಿಗಳು ಒಗ್ಗೂಡುವುದನ್ನು ನಿಷೇಧಿಸಲಾಗಿತ್ತು.


ಮಧ್ಯಮ ಹುರಿಯತ್ ಸಮ್ಮೇಳನದ (ಎಚ್‌ಸಿ) ಮಿರ್ವಾಯಿಜ್ ಮೌಲ್ವಿ ಒಮರ್ ಫಾರೂಕ್‌ನ ಭದ್ರಕೋಟೆಯಾದ ಶೆಹರ್-ಎ-ಖಾಸ್ (ಎಸ್‌ಕೆ) ನಲ್ಲಿನ ಐತಿಹಾಸಿಕ ಜಾಮಿಯಾ ಮಸೀದಿ ಆಗಸ್ಟ್ 5ರಿಂದ ಮುಚ್ಚಲ್ಪಟ್ಟಿದೆ. ಪ್ರಾರ್ಥನಾ ಸ್ಥಳದ ಎಲ್ಲಾ ಪ್ರವೇಶ ದ್ವಾರಗಳನ್ನೂ ಮುಚ್ಚಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಾಮಿಯಾ ಮಾರುಕಟ್ಟೆ ಮತ್ತು ಮಸೀದಿಯ ಹೊರಗೆ ಅರೆಸೈನಿಕ ಪಡೆ ನಿಯೋಜಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com