ಬಂಧಿತ ಎಲ್ಲಾ ರಾಜಕೀಯ ನಾಯಕರನ್ನು ಬಿಡುಗಡೆಗೊಳಿಸಿ: ಫಾರೂಖ್ ಅಬ್ದುಲ್ಲಾ

ಆರ್ಟಿಕಲ್ 370 ರದ್ಧತಿ ನಂತರ  ಬಂಧಿಸಿರುವ ಎಲ್ಲರನ್ನು ಷರತ್ತುರಹಿತವಾಗಿ  ಬಿಡುಗಡೆಗೊಳಿಸಬೇಕು ಎಂದು ನ್ಯಾಷನಲ್ ಕಾನ್ಪ್ ರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ  ಒತ್ತಾಯಿಸಿದ್ದಾರೆ.
ಫಾರೂಖ್ ಅಬ್ದುಲ್ಲಾ
ಫಾರೂಖ್ ಅಬ್ದುಲ್ಲಾ
Updated on: 

ಶ್ರೀನಗರ: ಆರ್ಟಿಕಲ್ 370 ರದ್ಧತಿ ನಂತರ  ಬಂಧಿಸಿರುವ ಎಲ್ಲರನ್ನು ಷರತ್ತುರಹಿತವಾಗಿ  ಬಿಡುಗಡೆಗೊಳಿಸಬೇಕು ಎಂದು ನ್ಯಾಷನಲ್ ಕಾನ್ಪ್ ರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ  ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ರಾಜಕೀಯ ಪ್ರಕ್ರಿಯೆಗಳು ಆರಂಭವಾಗಬೇಕಾದರೇ ಬಂಧಿತರನ್ನು ಬಿಡುಗಡೆಗೊಳಿಸಬೇಕೆಂದು ನಿಯೋಗದೊಂದಿಗೆ ತೆರಳಿ ಒತ್ತಾಯಿಸಿದ್ದಾರೆ, ಶಾಂತಿಯುತವಾಗಿ ಪ್ರತಿಭಟಿಸುವ ಮೂಲಕ ರಾಜ್ಯದ ವಿಶೇಷ ಸ್ಥಾನಮಾನ ಮತ್ತು ವಿಭಜನೆಯನ್ನು ರದ್ದುಪಡಿಸುವುದರ ಬಗ್ಗೆ ರಾಜ್ಯದ ಜನರು ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದಾರೆ ಹೀಗಾಗಿ ಸರ್ಕಾರ ಅವರ ಭಾವನೆಗಳನ್ನು ನಿರ್ಲಕ್ಷ್ಸಿಸಬಾರದು ಎಂದು ಮನವಿ ಮಾಡಿದ್ದಾರೆ.

ಭಾರತ ಸರ್ಕಾರವು ತಕ್ಷಣವೇ  ಕ್ರಮಗಳನ್ನು ಕೈಗೊಳ್ಳುವವರೆಗೆ ಯಾವುದೇ ರಾಜಕೀಯ ಪ್ರಕ್ರಿಯೆಗಳು ನಡೆಯುವುದಿಲ್ಲ.
ರಾಜ್ಯದಲ್ಲಿ ಬ್ಲಾಕ್ ಡೆವಲಪ್‌ಮೆಂಟ್ ಕೌನ್ಸಿಲ್ (ಬಿಡಿಸಿ) ಚುನಾವಣೆ ಅಕ್ಟೋಬರ್ 24 ರಂದು ನಡೆಯಲಿದ್ದು, ಅದರ ನಾಯಕರನ್ನು ಬಂಧನದಲ್ಲಿರಿಸಿದರೆ ಈ ಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಎನ್‌ಸಿ ವಕ್ತಾರ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com