72 ವರ್ಷಗಳ ಬಳಿಕ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮೊದಲ ಬಾರಿಗೆ ಶಾರದಾ ಪೂಜೆ!

ಭಾರತ ಮತ್ತು ಪಾಕ್ ನಡುವೆ ಬಿಗುವಿನ ಪರಿಸ್ಥಿತಿ ಉಂಟಾಗಿದ್ದರೂ ಪಾಕ್ ಆಕ್ರಮಿತ ಕಾಶ್ಮೀರ (ಪಿಓಕೆ)ಯಲ್ಲಿ ಕಳೆದ 72 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಶಾರದಾ ಪೂಜೆ ನೆರೆವೇರಿಸಲಾಗಿದೆ.
72 ವರ್ಷಗಳ ಬಳಿಕ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮೊದಲ ಬಾರಿಗೆ ಶಾರದಾ ಪೂಜೆ!
72 ವರ್ಷಗಳ ಬಳಿಕ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮೊದಲ ಬಾರಿಗೆ ಶಾರದಾ ಪೂಜೆ!

ನವದೆಹಲಿ: ಭಾರತ ಮತ್ತು ಪಾಕ್ ನಡುವೆ ಬಿಗುವಿನ ಪರಿಸ್ಥಿತಿ ಉಂಟಾಗಿದ್ದರೂ ಪಾಕ್ ಆಕ್ರಮಿತ ಕಾಶ್ಮೀರ (ಪಿಓಕೆ)ಯಲ್ಲಿ ಕಳೆದ 72 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಶಾರದಾ ಪೂಜೆ ನೆರೆವೇರಿಸಲಾಗಿದೆ.

ಭಾರತೀಯ ಮೂಲದ ಹಿಂದೂ ಹಾಂಕಾಂಗ್ ದಂಪತಿಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮಂಗಳವಾರ ಶಾರದಾ ಪೂಜೆ ಮಾಡಿದ್ದಾರೆ.

ಪಿಟಿ ವೆಂಕಟರಮಣ ಮತ್ತು ಸುಜಾತಾ ದಂಪತಿಗಳು ಪಿಓಕೆಯ ಶಾರದಾ ದೇವಾಲಯದಲ್ಲಿ ಪೂಜೆ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಶಾರದಾ ರಕ್ಷಣಾ ಸಮಿತಿಯ ಆಹ್ವಾನದ ಮೇರೆಗೆ ಅವರು ಶಾರದಾ ಪೂಜೆ ನೆರವೇರಿಸಿರುವುದು ಬಹಳ ಮಹತ್ವದ ಸುದ್ದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com