ಸಿಲಿಂಡರ್ ಸ್ಫೋಟಗೊಂಡ ಸ್ಥಳ
ದೇಶ
ಉತ್ತರ ಪ್ರದೇಶದಲ್ಲಿ ಸಿಲಿಂಡರ್ ಸ್ಫೋಟ: 11 ಮಂದಿ ದುರ್ಮರಣ
ಸಿಲಿಂಡರ್ ಸ್ಫೋಟಗೊಂಡು ಮನೆ ಕುಸಿದು ಬಿದ್ದ ಪರಿಣಾಮ 11 ಮಂದಿ ಸಾನ್ನಪ್ಪಿ ಹಲವಾರು ಜನರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶ ಮೌ ಜಿಲ್ಲೆಯಲ್ಲಿ ಬೆಳಗ್ಗೆ ನಡೆದಿದೆ.
ಲಕ್ನೋ: ಸಿಲಿಂಡರ್ ಸ್ಫೋಟಗೊಂಡು ಮನೆ ಕುಸಿದು ಬಿದ್ದ ಪರಿಣಾಮ 11 ಮಂದಿ ಸಾನ್ನಪ್ಪಿ ಹಲವಾರು ಜನರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶ ಮೌ ಜಿಲ್ಲೆಯಲ್ಲಿ ಬೆಳಗ್ಗೆ ನಡೆದಿದೆ.
ಮೌ ಜಿಲ್ಲೆಯ ಮೊಹಮ್ಮದಾಬಾದ್ ಪ್ರದೇಶದಲ್ಲಿನ ಎರಡು ಅಂತಸ್ತಿನ ಮನೆಯೊಳಗೆ ಸಿಲಿಂಡರ್ ಸ್ಫೋಟಗೊಂಡ ರಭಸಕ್ಕೆ ಮನೆ ಕುಸಿದು ಬಿದ್ದಿದ್ದು, ಹಲವರು ಅವಶೇಷಗಳಡಿ ಸಿಲುಕಿಕೊಂಡಿರುವ ಸಾಧ್ಯತೆ ಇದ್ದಿರುವುದಾಗಿ ಸ್ಥಳೀಯ ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.
ಭಾರೀ ದೊಡ್ಡ ಶಬ್ದ ಕೇಳಿ ಗಾಬರಿಗೊಳಗಾಗಿರುವುದಾಗಿ ಸ್ಥಳೀಯ ಜನರು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಅವಶೇಷಗಳಡಿ ಸಿಲುಕಿದ್ದಾರೆಯೇ ಎಂದು ಪರಿಶೀಲಿಸಲಾಗುತ್ತಿದೆ ಎಂದು ವರದಿ ವಿವರಿಸಿದೆ.
ಇನ್ನೂ ಸಿಲಿಂಡರ್ ಸ್ಪೋಟದ ಸಂಬಂಧ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಂತಾಪ ಸೂಚಿಸಿದ್ದು, ಕೂಡಲೇ ಎಲ್ಲಾ ರೀತಿಯ ಪರಿಹಾರ ಕಾರ್ಯ ಮತ್ತು ವೈದ್ಯಕೀಯ ನೆರವು ನೀಡಲು ಸಂಬಂಧಿಸಿದ ಇಲಾಖೆಗೆ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ