ಪ್ರಧಾನಿ ನರೇಂದ್ರ ಮೋದಿ ಮಾದರಿಯನ್ನು ಅಳವಡಿಸಿಕೊಂಡ ತೆಲಂಗಾಣ ಹೈಕೋರ್ಟ್ ನ್ಯಾಯಾಧೀಶ

ತೆಲಂಗಾಣ ಹೈಕೋರ್ಟ್ ನ್ಯಾಯಾಧೀಶರೊಬ್ಬರು ಮೋದಿ ಮಾದರಿಯನ್ನು ಅಳವಡಿಸಿಕೊಂಡು ಜನಸಾಮಾನ್ಯರಿಗೆ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ಮಾದರಿಯನ್ನು ಅಳವಡಿಸಿಕೊಂಡ ತೆಲಂಗಾಣ ಹೈಕೋರ್ಟ್ ನ್ಯಾಯಾಧೀಶರು!
ಪ್ರಧಾನಿ ನರೇಂದ್ರ ಮೋದಿ ಮಾದರಿಯನ್ನು ಅಳವಡಿಸಿಕೊಂಡ ತೆಲಂಗಾಣ ಹೈಕೋರ್ಟ್ ನ್ಯಾಯಾಧೀಶರು!

ಹೈದರಾಬಾದ್: ಮೊನ್ನೆ ತಮಿಳುನಾಡಿನ ಮಹಾಬಲಿಪುರಂ ಬೀಚ್ ನಲ್ಲಿ ಬೆಳ್ಳಂಬೆಳಿಗ್ಗೆ ಮೋದಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದ ವಿಡಿಯೋ ವೈರಲ್ ಆಗಿದ್ದು ನಿಮಗೆಲ್ಲ  ತಿಳಿದೇ ಇದೆ. ಈಗ ಇದೇ ರೀತಿ ತೆಲಂಗಾಣ ಹೈಕೋರ್ಟ್ ನ್ಯಾಯಾಧೀಶರೊಬ್ಬರು ಮೋದಿ ಮಾದರಿಯನ್ನು ಅಳವಡಿಸಿಕೊಂಡು ಜನಸಾಮಾನ್ಯರಿಗೆ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. 

ನ್ಯಾಯಾಧೀಶರಾದ ಚಲ್ಲ ಕೊದಂಡರಾಮ್, ಪಂಜಾಬ್ -ಹರ್ಯಾಣ ಹೈಕೋರ್ಟ್ ಗೆ ವರ್ಗಾವಣೆಯಾಗಿದ್ದ ತಮ್ಮ ಸಹೋದ್ಯೋಗಿಯಾಗಿದ್ದ ಪಿವಿ ಸಂಜಯ್ ಕುಮಾರ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮ ಆರಂಭವಾಗುವುದಕ್ಕೂ ಮುನ್ನ ಲಾನ್ ನಲ್ಲಿ ಹೈಕೋರ್ಟ್ ಅಡ್ವೊಕೇಟ್ ಅಸೋಸಿಯೇಷನ್ ವತಿಯಿಂದ ಅತಿಥಿಗಳಿಗೆ ಟಿ ಹಾಗೂ ಲಘು ಆಹಾರದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮ ಪ್ರಾರಂಭವಾದೊಡನೆ ಕೊಠಡಿಗೆ ಹೋಗುವ ಧಾವಂತದಲ್ಲಿ ಬಹುತೇಕ ಅತಿಥಿಗಳು ಲಾನ್ ನಲ್ಲಿಯೇ ಪೇಪರ್ ಪ್ಲೇಟ್ ಹಾಗೂ ಲೋಟಗಳನ್ನು ಕಸದ ಬುಟ್ಟಿಗೆ ಹಾಕುವ ಬದಲು ಲಾನ್ ನಲ್ಲಿಯೇ ಎಸೆದಿದ್ದರು.   

ಇದನ್ನು ಗಮನಿಸಿದ ನ್ಯಾ.ಕೋದಂಡರಾಮ್ ತಕ್ಷಣವೇ ಎಚ್ಚೆತ್ತು ಲಾನ್ ನಲ್ಲಿದ್ದ ಕಸದ ಪೇಪರ್ ತಟ್ಟೆಗಳು ಹಾಗೂ ಲೋಟಗಳನ್ನು ಸ್ವತಃ ಸ್ವಚ್ಛಗೊಳಿಸಿ ಕಸದ ಬುಟ್ಟಿಗೆ ಹಾಕಿ ಜೈ ಸ್ವಚ್ಛ ಭಾರತ್ ಘೋಷಣೆ ಕೂಗಿದ್ದಾರೆ.

ನ್ಯಾಯಾಧೀಶರ ಸ್ವಚ್ಛತಾ ಪ್ರಜ್ಞೆಯನ್ನು ಕಂಡು ನಾವು ತಲೆ ತಗ್ಗಿಸುವಂತಾಯಿತು, ತಕ್ಷಣವೇ ನಾನು ನ್ಯಾಯಾಧೀಶರ ಜೊತೆ ಸೇರಿದೆ ನನ್ನ ಜೊತೆ ಮತ್ತಷ್ಟು ಅಡ್ವೊಕೇಟ್ ಗಳು ಬಂದರು ಎಲ್ಲರೂ ಒಗ್ಗೂಡಿ ಲಾನ್ ಸ್ವಚ್ಛಗೊಳಿಸಿದೆವು ಎಂದು ತೆಲಂಗಾಣ ಹೈಕೋರ್ಟ್ ಬಾರ್ ಅಸೊಸಿಯೇಷನ್ ನ ಅಧ್ಯಕ್ಷ ಥೋಟ ಸೂರ್ಯ ಕಿರಣ್ ರೆಡ್ಡಿ ಹೇಳಿದ್ದಾರೆ. 

ಇಷ್ಟೆಲ್ಲಾ ಆದರೂ ಸಹ ಕೆಲವು ಅತಿಥಿಗಳು ಸುಮ್ಮನೆ ನೋಡುತ್ತಾ ನಿಂತಿದ್ದರೆ ಇನ್ನೂ ಕೆಲವರು ಸ್ವಚ್ಛತಾ ಕಾರ್ಯದಲ್ಲಿ ಕೈ ಜೋಡಿಸುವುದನ್ನು ಬಿಟ್ಟು ಮೊಬೈಲ್ ನಲ್ಲಿ ವಿಡಿಯೋ ಮಾಡುವುದರಲ್ಲಿ ವ್ಯಸ್ಥರಾಗಿದ್ದರು ಎಂದು ಕಿರಣ್ ರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ನ್ಯಾ.ಕೋದಂಡರಾಮ್ ಅವರು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಸತ್ಯ ಸಾಯಿ ವಿದ್ಯಾಸಂಸ್ಥೆಯಲ್ಲಿ ಕಲಿತವರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com