ಕಾಸರಗೋಡು: ಗ್ಯಾಸ್ ಟ್ಯಾಂಕರ್ ಪಲ್ಟಿ, ರಸ್ತೆ ಸಂಚಾರ ನಿಷೇಧ

ಗ್ಯಾಸ್ ಟ್ಯಾಂಕರ್ ಒಂದು ಪಲ್ಟಿಯಾದ ಪರಿಣಾಮ ಅನಿಲ ಸೋರಿಕೆಯುಂಟಾಗಿರುವ ಘಟನೆ ಮಂಗಳೂರು-ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಕಾಸರಗೋಡು: ಗ್ಗ್ಯಾಸ್ ಟ್ಯಾಂಕರ್ ಪಲ್ಟಿ, ರಸ್ತೆ ಸಂಚಾರ ನಿಷೇಧ
ಕಾಸರಗೋಡು: ಗ್ಗ್ಯಾಸ್ ಟ್ಯಾಂಕರ್ ಪಲ್ಟಿ, ರಸ್ತೆ ಸಂಚಾರ ನಿಷೇಧ
Updated on

ಕಾಸರಗೋಡು: ಗ್ಯಾಸ್ ಟ್ಯಾಂಕರ್ ಒಂದು ಪಲ್ಟಿಯಾದ ಪರಿಣಾಮ ಅನಿಲ ಸೋರಿಕೆಯುಂಟಾಗಿರುವ ಘಟನೆ ಮಂಗಳೂರು-ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಕಾಸರಗೋಡಿನಿಂದ ಒಂದು ಕಿಮೀ ಅಂತರದ ಅಡ್ಕತ್ ಬೈಲ್ ಎಂಬಲ್ಲಿ ಗ್ಯಾಸ್ ಟ್ಯಾಂಕರ್ ಮಗುಚಿ ಅಪಘಾತ ಸಂಭವಿಸಿದೆ.

ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ರಸ್ತೆಯಲ್ಲಿ ಮಗುಚಿ ಬಿದ್ದಿದೆ.

ಬುಧವಾರ ನಸುಕಿನ ಜಾವ ಮೂರು ಗಂಟೆ ಸುಮಾರಿಗೆ ಅಪಘಾತ ನಡೆದಿದೆ.ಅನಿಲ ಸೋರಿಕೆಯುಂಟಾಗಿ ಅಪಾಯಕಾರಿ ವಾತಾವರಣ ಸೃಷ್ಟಿಯಾಗಿರುವ ಕಾರಣ ಇಂದು ಮಧ್ಯಾಹ್ನದವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಡೆಸದಂತೆ ನಿಷೇಧ ಹೇರಾಗಿದೆ.. ಅಲ್ಲದೆ ಸ್ಥಳೀಯ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದ್ದು ಶಾಲಾ,ಕಾಲೇಜಿಗೆ ರಜೆ ನೀಡಲಾಗಿದೆ.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದು  ಸೋರಿಕೆ ತಡೆಗೆ ಪ್ರಯತ್ನ ನಡೆದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com