ಸಚಿವರಾಗಿಯೂ ಕೆಲಸ ಮಾಡದಿದ್ದರೆ ಕೈಗೆ ಬಳೆ ತೊಟ್ಟಿಕೊಳ್ಳಿ: ಮಾಜಿ ಸಹೋದ್ಯೋಗಿ ವಿರುದ್ಧ ಪವಾರ್ ಕಿಡಿ
ಅಹ್ಮದ್ ನಗರ: 13 ವರ್ಷ ಸಚಿವರಾಗಿದ್ದರೂ ಯಾವುದೇ ಕೆಲಸ ಮಾಡಿದ್ದರೆ ಕೈಗೆ ಬಳೆ ತೊಟ್ಟಿಕೊಳ್ಳಿ ಎಂದು ಎನ್ ಸಿಪಿಯ ಮಾಜಿ ಮುಖಂಡ ಬಾಬನ್ರಾವ್ ಪಚ್ಪ್ಯೂಟ್ ವಿರುದ್ಧ ಎನ್ ಸಿಪಿಯ ವರಿಷ್ಠ ಶರದ್ ಪವಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಚ್ಪ್ಯೂಟ್ 2014ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈಗ ಅಹ್ಮದ್ ನಗರ ಜಿಲ್ಲೆಯ ಶ್ರಿಗೊಂಡಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಅಕ್ಟೋಬರ್ 21 ರಂದು ಮಹಾರಾಷ್ಟ್ರದಲ್ಲಿ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಎನ್ ಸಿಬಿ ಅಭ್ಯರ್ಥಿ ಘಾಣ ಶ್ಯಾಮ್ ಶೆಲಾರ್ ಪರವಾಗಿ ಮತ ಯಾಚಿಸಿದ ಪವಾರ್, ಕಾಂಗ್ರೆಸ್- ಎನ್ ಸಿಪಿ ಆಡಳಿತಾವಧಿಯಲ್ಲಿ 13 ವರ್ಷಗಳ ಕಾಲ ಸಚಿವರಾಗಿದ್ದರೂ ಸಹಿ ಮಾಡುವ ಅಧಿಕಾರ ಹೊರತುಪಡಿಸಿ ಬೇರೆ ಯಾವುದೇ ಸ್ವಾತಂತ್ರ್ಯ ವಿರಲಿಲ್ಲ ಎಂದು ಪಚ್ಪ್ಯೂಟ್ ಇತ್ತೀಚಿಗೆ ಹೇಳಿಕೆ ನೀಡಿದ್ದಾರೆ. ಆದರೆ. ಮಂತ್ರಿಯೊಬ್ಬರ ಸಹಿಯೊಂದಿಗೆ ಕೆಲಸಗಳೂ ಅನುಮೋದನೆ ಪಡೆಯುತ್ತವೆ ಎಂದರು.
ಸಹಿ ಮಾಡುವ ಹಕ್ಕು ಮಾತ್ರ, ಬೇರೆ ಏನನ್ನೂ ಮಾಡಲಿಲ್ಲ ಎನ್ನುವವರಿಗೆ ಏನಂತಾ ಕರೆಯಬೇಕು? ಸಚಿವರಾಗಿದ್ದರೂ ಏನನ್ನು ಮಾಡದಿದ್ದರೆ ಹೋಗಿ ಕೈಗಳಿಗೆ ಬಳೆ ತೊಟ್ಟಿಕೊಳ್ಳಿ ಎಂದು ಪವಾರ್ ಕಿಡಿಕಾರಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ