ಪ್ರಧಾನಿ ಮೋದಿ ರ‍್ಯಾಲಿಗಾಗಿ ಮರಗಳಿಗೆ ಕತ್ತರಿ: ಅಡ್ಡಿ ಏಕೆ? ಪ್ರಕಾಶ್ ಜಾವಡೇಕರ್ 

ಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಗಾಗಿ ಮರಗಳಿಗೆ ಕತ್ತರಿ ಹಾಕುತ್ತಿರುವುದನ್ನು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಸಮರ್ಥಿಸಿಕೊಂಡಿದ್ದಾರೆ. ಈ ಹಿಂದೆ ಕೂಡಾ ಇಂತಹ ಕೆಲಸಗಳನ್ನು ಮಾಡಲಾಗಿದೆ. ಆದರೆ, ಹೆಚ್ಚಿನ ಗಿಡಗಳನ್ನು ಸಹ ಬೆಳೆಸಲಾಗಿದೆ ಎಂದು ಹೇಳಿದ್ದಾರೆ.
ಪ್ರಕಾಶ್ ಜಾವಡೇಕರ್
ಪ್ರಕಾಶ್ ಜಾವಡೇಕರ್

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಗಾಗಿ ಮರಗಳಿಗೆ ಕತ್ತರಿ ಹಾಕುತ್ತಿರುವುದನ್ನು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಸಮರ್ಥಿಸಿಕೊಂಡಿದ್ದಾರೆ. ಈ ಹಿಂದೆ ಕೂಡಾ ಇಂತಹ ಕೆಲಸಗಳನ್ನು ಮಾಡಲಾಗಿದೆ. ಆದರೆ, ಹೆಚ್ಚಿನ ಗಿಡಗಳನ್ನು ಸಹ ಬೆಳೆಸಲಾಗಿದೆ ಎಂದು ಹೇಳಿದ್ದಾರೆ.

 ಪುಣೆ ನಗರದಲ್ಲಿನ ಪರಶುರಾಮ್ ಕಾಲೇಜ್ ಕ್ಯಾಂಪಸ್ ಆವರಣದಲ್ಲಿ ಅಕ್ಟೋಬರ್ 17 ರಂದು ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ  ರ‍್ಯಾಲಿಗಾಗಿಗಾಗಿ ಅನೇಕ ಮರಗಳನ್ನು ಕಡಿಯಲಾಗುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಗಳ ಬೆನ್ನಲ್ಲೇ  ಪ್ರಕಾಶ್ ಜಾವಡೇಕರ್ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಎಲ್ಲಾ ಸಂದರ್ಭಗಳಲ್ಲಿಯೂ ಮರಗಳನ್ನು ಕತ್ತರಿಸಲಾಗಿದ್ದು, ನಂತರ ಹೆಚ್ಚಿನ ಸಸಿಗಳನ್ನು ಹಾಕಲಾಗಿದೆ. ಇದು ಅರಣ್ಯ ಇಲಾಖೆಯ ನೀತಿಯಾಗಿದೆ ಎಂದು ಸುದ್ದಿಗಾರರಿಗೆ ಅವರು ತಿಳಿಸಿದ್ದಾರೆ. 

ಮೋದಿ ರ‍್ಯಾಲಿಗಾಗಿ ಮರಗಳನ್ನು ಕಡಿಯುವುದಕ್ಕೆ ಅಡ್ಡಿ ಏನು? ಈ ಹಿಂದಿನ ಪ್ರಧಾನ ಮಂತ್ರಿಗಳ ರ‍್ಯಾಲಿಗಾಗಿಯೂ ಮರಗಳನ್ನು ಕಡಿಯಲಾಗಿದೆಯ ಈ ಬಗ್ಗೆ ಏಕೆ ಈ ಹಿಂದೆ ಅರಿವು ಮೂಡಿಸಲಿಲ್ಲ ಎಂಬುದು ಆಶ್ಚರ್ಯಕರವಾಗಿದೆ ಎಂದ ಕೇಂದ್ರ ಸಚಿವರು, ವೀರ ಸಾವರ್ಕರ್, ಜ್ಯೂತಿಭಾ ಪುಲೆ, ಸಾವಿತ್ರ ಬಾಯಿ ಪುಲೆ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಕೇಂದ್ರಸರ್ಕಾರಕ್ಕೆ ಶಿಫಾರಸ್ಸು ಮಾಡುವುದನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿರುವುದು ಸಂತಸದ ಸಂಗತಿಯಾಗಿದೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com