ಹೇಮಾ ಮಾಲಿನಿ
ದೇಶ
ಭಾರತ ದೇಶ ಮೋದಿ ಅವರ ಸುರಕ್ಷಿತ ಕೈಗಳಲ್ಲಿದೆ: ಹೇಮಾಮಾಲಿನಿ
ಭಾರತ ದೇಶಕ್ಕೆ ಯಾವುದೇ ಅಪಾಯವಿಲ್ಲ ಏಕೆಂದರೆ ರಾಷ್ಟ್ರ ಮೋದಿ ಅವರ ಸುರಕ್ಷಿತ ಕೈಗಳಲ್ಲಿದೆ ಎಂದು ಬಿಜೆಪಿ ಸಂಸದೆ ಹೇಮಾಮಾಲಿನಿ ಪ್ರಧಾನಿಯವರನ್ನು ಹಾಡಿ ಹೊಗಳಿದ್ದಾರೆ.
ಚಂಡಿಗಡ: ಭಾರತ ದೇಶಕ್ಕೆ ಯಾವುದೇ ಅಪಾಯವಿಲ್ಲ ಏಕೆಂದರೆ ರಾಷ್ಟ್ರ ಮೋದಿ ಅವರ ಸುರಕ್ಷಿತ ಕೈಗಳಲ್ಲಿದೆ ಎಂದು ಬಿಜೆಪಿ ಸಂಸದೆ ಹೇಮಾಮಾಲಿನಿ ಪ್ರಧಾನಿಯವರನ್ನು ಹಾಡಿ ಹೊಗಳಿದ್ದಾರೆ.
ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ಪಾಲ್ಗೋಂಡ ಹೇಮಮಾಲಿನಿ, ಹರ್ಯಾಣದಲ್ಲಿರುವ ಮನೋಹರ್ ಲಾಲ್ ಕಟ್ಟಾರ್ ನೇತೃತ್ವದ ಬಿಜೆಪಿ ಸರ್ಕಾರ ಸ್ವಚ್ಛ ಮತ್ತು ಪಾರದರ್ಶಕ ಆಡಳಿತವನ್ನು ಒದಗಿಸುವುದು ಹಾಗೂ ಅರ್ಹತೆಯ ಮೇಲೆ ಉದ್ಯೋಗಗಳನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದ್ದಾರೆ.
ಅಕ್ಟೋಬರ್ 21ರಂದು ನಡೆಯುವ ಹರ್ಯಾಣ ವಿಧಾನಸಭೆ ಚುನಾವಣೆಗಾಗಿ ಪಲ್ವಾಲ್ ಮತ್ತು ಮಹೇಂದ್ರ ಗಢದಲ್ಲಿ ಹೇಮಾಮಾಲಿನ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ