ಪ್ರೀತಿಸಿ ಮದುವೆಗೆ ನಿರಾಕರಣೆ:  ಯುವಕನ ಮುಖಕ್ಕೆ ಆಸಿಡ್ ಎರಚಿದ ಯುವತಿ! 

ಪ್ರೀತಿ ಮಾಡಿ ಮದುವೆಗೆ ನಿರಾಕರಿಸಿದ ಯುವಕನ ಮುಖಕ್ಕೆ ಹುಡುಗಿಯೊಬ್ಬಳು ಆಸಿಡ್ ಎರಚಿದ ಘಟನೆ ಉತ್ತರ ಪ್ರದೇಶದ ಆಲಿಗಢ್ ನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಅಲಿಗಢ: ಪ್ರೀತಿ ಮಾಡಿ ಮದುವೆಗೆ ನಿರಾಕರಿಸಿದ ಯುವಕನ ಮುಖಕ್ಕೆ ಹುಡುಗಿಯೊಬ್ಬಳು ಆಸಿಡ್ ಎರಚಿದ ಘಟನೆ ಉತ್ತರ ಪ್ರದೇಶದ ಆಲಿಗಢ್ ನಲ್ಲಿ ನಡೆದಿದೆ.

ಫೈಜದ್ ಎಂಬ ಹುಡುಗನ ಮೇಲೆ ಆಸಿಡ್ ಎರಚಲಾಗಿದೆ. ಈತ ಕಳೆದ ಆರು ತಿಂಗಳಿಂದ ಒರ್ವ ಹುಡುಗಿಯನ್ನು ಪ್ರೀತಿಸುತ್ತಿದ್ದ. ಆದರೆ ಕಳೆದ ಒಂದು ತಿಂಗಳಿಂದ ಆತ ಹುಡುಗಿಯನ್ನು ನಿರ್ಲಕ್ಷ್ಯಿಸುತ್ತಿದ್ದ, ಇದೇ ಕಾರಣಕ್ಕಾಗಿ ಆಕೆ ಆಸಿಡ್ ದಾಳಿ ನಡೆಸಿದ್ದಾಳೆ ಎಂದು ವರದಿಯಾಗಿದೆ.

ಆರೋಪಿ ಹುಡುಗಿಯನ್ನು ಬಂಧಿಸಲಾಗಿದ್ದು, ಸೆಕ್ಷನ್ 326 ಎ ಅಡಿ ಪ್ರಕರಣ ದಾಖಲಾಗಿದೆ. ದಾಳಿಗೊಳಗಾದ ಫೈಜದ್ ಆಸ್ಪತ್ರೆಗೆ ದಾಖಲಾಗಿದ್ದು, ಕಣ್ಣಿನ ಭಾಗಕ್ಕೆ ಹೆಚ್ಚಿನ ಗಾಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ನನ್ನ ಮಗನಿಗೆ ಆ ಯುವತಿ ಕರೆ ಮಾಡುತ್ತಿದ್ದಳು, ಆದರೆ ನನ್ನ ಮಗ ಆಕೆಯ ಕರೆಗೆ ಉತ್ತರಿಸುತ್ತಿರಲಿಲ್ಲ, ಹೀಗಾಗಿ ಆತನ ಮೇಲೆ ಆಸಿಡ್ ದಾಳಿ ನಡೆದಿದೆ, ನನ್ನ ಮಗನನ್ನು ಪ್ರೀತಿಸುತ್ತಿದ್ದ ಆಕೆ, ವಿವಾಹವಾಗುವಂತೆ ಪೀಡಿಸುತ್ತಿದ್ದಳು,  ಆದರೆ ಆತ ಅದಕ್ಕೆ ಒಪ್ಪಿರಲಿಲ್ಲ ಎಂದು ಸಂತ್ರಸ್ತ  ಯುವಕನ ತಾಯಿ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com