ಶರದ್ ಪವಾರ್
ಶರದ್ ಪವಾರ್

ಶಿವಸೇನೆ 50:50 ಕೇಳುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ: 'ಸೇನೆ' ಪರ ಪವಾರ್ ಬ್ಯಾಟಿಂಗ್

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಫಲಿತಾಂಶ ಲಭಿಸಿಲ್ಲದ ಕಾರಣ ಶಿವಸೇನೆ ಹೆಚ್ಚಿನ ಸ್ಥಾನ ಪಡೆದಿದ್ದು, ಶಿವಸೇನೆ ವರಿಷ್ಠ ಉದ್ಧವ್ ಠಾಕ್ರೆ 50-50ರ ಫಾರ್ಮುಲಾ ಕೇಳುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.

ಮುಂಬಯಿ:  ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಫಲಿತಾಂಶ ಲಭಿಸಿಲ್ಲದ ಕಾರಣ ಶಿವಸೇನೆ ಹೆಚ್ಚಿನ ಸ್ಥಾನ ಪಡೆದಿದ್ದು, ಶಿವಸೇನೆ ವರಿಷ್ಠ ಉದ್ಧವ್ ಠಾಕ್ರೆ 50-50ರ ಫಾರ್ಮುಲಾ ಕೇಳುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 1990 ರಲ್ಲೂ ಕೂಡ ಬಿಜೆಪಿ ಮತ್ತು ಶಿವಸೇನೆ 50:50 ಫಾರ್ಮುಲಾದಂತೆ ಸರ್ಕಾರ ರಚಿಸಿದ್ದವು.,ಶಿವಸೇನೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಮುಂದೆ ಈ ಬೇಡಿಕೆ ಇಟ್ಟಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ತಿಳಿಸಿದ್ದಾರೆ, 

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕಾಂಗ್ರೆಸ್-ಎನ್ ಸಿ ಪಿ ಮೈತ್ರಿಕೂಡ 102 ಸೀಟು ಪಡೆದಿದೆ, ಬಿಜೆಪಿ-ಶಿವಸೇನೆ ಮೈತ್ರಿಕೂಟ 220 ಸೀಟು ಗೆಲ್ಲುವ ಗುರಿ ಹೊಂದಿತ್ತು. 

ಕಾಂಗ್ರೆಸ್ ಸ್ಥಳೀಯ ನಾಯಕರು ನಮ್ಮೊಂದಿಗೆ ಕೆಲಸ ಮಾಡಿದ್ದಾರೆ, ಸೋನಿಯಾ ಗಾಂಧಿ ಅವರ ಅನಾರೋಗ್ಯ ಕಾರಣದಿಂದಾಗಿ ಅವರು ಪ್ರಚಾರ ಕಾರ್ಯಕ್ಕೆ ಬರಲಾಗಲಿಲ್ಲ,ಆದರೆ ರಾಹುಲ್ ಗಾಂಧಿ ಬಂದಿದ್ದರು ಎಂದು ಪವಾರ್ ಹೇಳಿದ್ದಾರೆ

Related Stories

No stories found.

Advertisement

X
Kannada Prabha
www.kannadaprabha.com