ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉಚಿತ ಶಿಕ್ಷಣ, ಆಹಾರ, ವಸತಿ ಒದಗಿಸುತ್ತಿರುವ ಪ್ರೊಫೆಸರ್!

 ಇಂಗ್ಲೀಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾನಿಲಯದ, ಅರಬ್ ಸ್ಟಡೀಸ್ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಡಾ. ಸಯ್ಯದ್ ಜಹಾಂಗೀರ್ ತಮ್ಮ ಕಿರು ಶಿಕ್ಷಣ ಸಂಸ್ಥೆಯಲ್ಲಿ  ಆರ್ಥಿಕವಾಗಿ ತಳಮಟ್ಟದ ಕುಟುಂಬದ ಮಕ್ಕಳಿಗೆ  ಉಚಿತವಾಗಿ ಶಿಕ್ಷಣ, ಆಹಾರ ಹಾಗೂ ವಸತಿ ಸೌಕರ್ಯವನ್ನು ಒದಗಿಸುತ್ತಿದ್ದಾರೆ. 
ಡಾ. ಸಯ್ಯದ್ ಜಹಾಂಗೀರ್
ಡಾ. ಸಯ್ಯದ್ ಜಹಾಂಗೀರ್

ಹೈದ್ರಾಬಾದ್:  ಇಂಗ್ಲೀಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾನಿಲಯದ, ಅರಬ್ ಸ್ಟಡೀಸ್ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಡಾ. ಸಯ್ಯದ್ ಜಹಾಂಗೀರ್ ತಮ್ಮ ಕಿರು ಶಿಕ್ಷಣ ಸಂಸ್ಥೆಯಲ್ಲಿ  ಆರ್ಥಿಕವಾಗಿ ತಳಮಟ್ಟದ ಕುಟುಂಬದ ಮಕ್ಕಳಿಗೆ  ಉಚಿತವಾಗಿ ಶಿಕ್ಷಣ, ಆಹಾರ ಹಾಗೂ ವಸತಿ ಸೌಕರ್ಯವನ್ನು ಒದಗಿಸುತ್ತಿದ್ದಾರೆ. 

ಬಡ ಮಕ್ಕಳಿಗೆ  ಭಾಷೆಗಳ ಜೊತೆಗೆ ಸಾಮಾಜಿಕ ಹಾಗೂ ರಾಜಕೀಯ ವಿಜ್ಞಾನ ವಿಷಯವನ್ನು ಈ ಪ್ರೊಫೆಸರ್ ಬೋಧಿಸುತ್ತಾರೆ. ದುರ್ಬಲ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಅಗತ್ಯವಿದೆ .ಉತ್ತಮವಾದ ಶಿಕ್ಷಣವನ್ನು ನೀಡಿದರೆ ಮುಂದೆ ಉತ್ತಮ ಶಿಕ್ಷಕರಾಗುತ್ತಾರೆ ಎಂಬುದು ನನ್ನ ನಂಬಿಕೆಯಾಗಿದೆ. ಇಂಗ್ಲೀಷ್ ಮಾಡೆಲ್ ಇಸ್ಲಾಂಮಿಕ್ ವಿವಿಯಲ್ಲಿ ಇಂಗ್ಲೀಷ್, ಸಂಸ್ಕೃತ, ಅರಬಿಕ್, ಉರ್ದು, ಪಾರ್ಸಿ ಭಾಷೆಗಳ ಬಗ್ಗೆ ಆಧುನಿಕ ರೀತಿಯಲ್ಲಿ ಉಪನ್ಯಾಸ ನೀಡುವುದಾಗಿ ತಿಳಿಸಿದ್ದಾರೆ.

ಇಂಗ್ಲೀಷ್, ವಿದೇಶಿ ಭಾಷೆಗಳ ವಿವಿಯಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಪ್ರೊಫೆಸರ್ ಜಹಾಂಗೀರ್, ವಿರಾಮದ ವೇಳೆಯಲ್ಲಿ ಹಿಂದುಳಿದ ವರ್ಗಗಳ ಮಕ್ಕಳ ಜೊತೆಗೆ ಸಮಯ ಕಳೆಯುತ್ತಾರೆ.  ಉನ್ನತ ಶಿಕ್ಷಣಗಾಗಿ ದೇಶದ ವಿವಿಧ ಕಡೆಗಳಿಂದ ಮಕ್ಕಳು ಬಂದಿದ್ದು, ಅವರಿಗೆ ಉಚಿತವಾಗಿ ಊಟ, ವಸತಿ ಹಾಗೂ ಶಿಕ್ಷಣವನ್ನು ನೀಡಲಾಗುತ್ತಿದೆ. ಅನೇಕ ಮಾಜಿ ವಿದ್ಯಾರ್ಥಿಗಳು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಭಾಷಾಂತಾರಕ್ಕಾಗಿ ಕೆಲಸ ನಿರ್ವಹಿಸುತ್ತಿರುವುದಾಗಿ ಅವರು ಹೇಳಿದ್ದಾರೆ.

ಖುಷಿಯಿಂದ ವ್ಯಾಸಂಗ ಮಾಡುತ್ತಿರುವುದಾಗಿ ಬಿಹಾರದಿಂದ ಬಂದಿರುವ ವಿದ್ಯಾರ್ಥಿ ಮೊಹಮ್ಮದ್ ಸಾದಿಕ್  ಹಾಗೂ ಅಬ್ದುಲ್ ಅಲೀಮ್ ಸಂತಸ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com