ಎನ್ ಆರ್ ಸಿಯಿಂದ ಹೊರಗುಳಿದವರಿಗೆ ಎಲ್ಲಾ ಹಕ್ಕುಗಳು ಸಿಗಲಿವೆ, ಆದರೆ.....: ವಿದೇಶಾಂಗ ಇಲಾಖೆ ಹೇಳಿದ್ದಿಷ್ಟು

ಎನ್ ಆರ್ ಸಿಯಿಂದ ಹೊರಗುಳಿದವರು ನಿರಾಶ್ರಿತರಲ್ಲ, ಕಾನೂನಿನ ಅಡಿಯಲ್ಲಿ ಸಿಗಬಹುದಾದ ಎಲ್ಲಾ ನೆರವುಗಳನ್ನು ಪಡೆಯುವವರೆಗೆ  ಎಲ್ಲಾ ಹಕ್ಕುಗಳು ದೊರೆಯಲಿವೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. 
ಎನ್ ಆರ್ ಸಿ
ಎನ್ ಆರ್ ಸಿ

ನವದೆಹಲಿ: ಎನ್ ಆರ್ ಸಿಯಿಂದ ಹೊರಗುಳಿದವರು ನಿರಾಶ್ರಿತರಲ್ಲ, ಕಾನೂನಿನ ಅಡಿಯಲ್ಲಿ ಸಿಗಬಹುದಾದ ಎಲ್ಲಾ ನೆರವುಗಳನ್ನು ಪಡೆಯುವವರೆಗೆ ಎಲ್ಲಾ ಹಕ್ಕುಗಳು ದೊರೆಯಲಿವೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. 

ಎನ್ ಆರ್ ಸಿ ಪಟ್ಟಿಯಿಂದ ಹೊರಗುಳಿಯುವುದರಿಂದ ಅಸ್ಸಾಂ ನಲ್ಲಿರುವ ನಾಗರಿಕರ ಹಕ್ಕುಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಹಿಂದಿದ್ದ ಹಕ್ಕುಗಳು ಸಿಗಲಿವೆ. ಎಲ್ಲಾ ಕಾನೂನು ನೆರವು ಪೂರ್ಣಗೊಂಡು ಅಂತಿಮ ಹಂತ ತಲುಪುವವರೆಗೆ ಎಲ್ಲಾ ಹಕ್ಕುಗಳು ದೊರೆಯುತ್ತವೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

3.3 ಕೋಟಿ ಅರ್ಜಿದಾರರ ಪೈಕಿ 19 ಲಕ್ಷ ಜನರನ್ನು ಎನ್ ಆರ್ ಸಿ ಪಟ್ಟಿಯಿಂದ ಹೊರಗಿಡಲಾಗಿದೆ. ಅಂತಿಮ ಪಟ್ಟಿಯಲ್ಲಿ ಇಲ್ಲದವರನ್ನು ಬಂಧಿಸಲಾಗುವುದಿಲ್ಲ. ಅವರಿಗೆ ಕಾನೂನು ನೆರವು ಲಭ್ಯವಾಗಲಿದೆ. ಎಲ್ಲಾ ಕಾನೂನು ಪ್ರಕ್ರಿಯೆ ಮುಕ್ತಾಯಗೊಳ್ಳುವವರೆಗೂ ಎನ್ ಆರ್ ಸಿಯಲ್ಲಿ ಇಲ್ಲದೇ ಇರುವವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಎಂಇಎ ವಕ್ತಾರ ರವೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com