• Tag results for rights

ಮಾಲಿನ್ಯ ಕಡಿಮೆಯಾಗುವವರೆಗೆ ಶಾಲೆಗಳನ್ನು ಮುಚ್ಚುವಂತೆ ದೆಹಲಿ ಸರ್ಕಾರಕ್ಕೆ ಮಕ್ಕಳ ಹಕ್ಕುಗಳ ಸಂಸ್ಥೆ ಸೂಚನೆ

ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಸುಧಾರಿಸುವವರೆಗೆ ಶಾಲೆಗಳನ್ನು ಮುಚ್ಚುವಂತೆ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಇರುವ ರಾಷ್ಟ್ರೀಯ ಆಯೋಗ (ಎನ್‌ಸಿಪಿಸಿಆರ್‌) ದೆಹಲಿ ಸರ್ಕಾರಕ್ಕೆ ಸೂಚಿಸಿದೆ.

published on : 2nd November 2022

ಕೈದಿಗಳಿಗೆ ಮತದಾನದ ಹಕ್ಕು ಕೋರಿರುವ ಪಿಐಎಲ್‌ಗೆ ಕೇಂದ್ರ, ಚುನಾವಣಾ ಆಯೋಗದ ಪ್ರತಿಕ್ರಿಯೆ ಕೇಳಿದ 'ಸುಪ್ರೀಂ'

ಕೈದಿಗಳಿಗೆ ಮತದಾನದ ಹಕ್ಕನ್ನು ತಡೆಯುವ ಜನಪ್ರತಿನಿಧಿ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ಕುರಿತು ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದಿಂದ ಪ್ರತಿಕ್ರಿಯೆ ಕೇಳಿದೆ.

published on : 31st October 2022

ಕಳ್ಳತನದ ಆರೋಪ: ಇಬ್ಬರು ಬಾಲಕರ ಕಾಲನ್ನು ವಾಹನಕ್ಕೆ ಕಟ್ಟಿ ಎಳೆದೊಯ್ದು ಹಲ್ಲೆ, ಮೂವರು ಶಂಕಿತರ ಬಂಧನ

ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ನಗದು ಕಳ್ಳತನ ಮಾಡಿದ ಆರೋಪದ ಮೇಲೆ ಇಬ್ಬರು ಬಾಲಕರನ್ನು ಥಳಿಸಿ ವಾಹನಕ್ಕೆ ಕಟ್ಟಿ ಎಳೆದೊಯ್ದು ಚಿತ್ರಹಿಂಸೆ ನೀಡಿದ ಪ್ರಕರಣದಲ್ಲಿ ಪೊಲೀಸರು ಮೂವರು ಶಂಕಿತರನ್ನು ಬಂಧಿಸಿದ್ದು, ಪ್ರಮುಖ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

published on : 31st October 2022

ಪ್ರೇಮ್- ಧ್ರುವ ಸರ್ಜಾ ಕಾಂಬಿನೇಷನ್ ನ 'ಕೆ ಡಿ' ಸಿನಿಮಾ ವಿತರಣಾ ಹಕ್ಕು ಚಿತ್ರೀಕರಣಕ್ಕೂ ಮುನ್ನವೇ ಮಾರಾಟ!

ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ಅವರ ಮುಂದಿನ ಚಿತ್ರಕ್ಕೆ 'ಕೆಡಿ ದಿ ಡೆವಿಲ್' ಎಂಬ ಟೈಟಲ್ ಇಡಲಾಗಿದೆ. ಸಿನಿಮಾದ ಟೀಸರ್ ಅನ್ನು ಬಾಲಿವುಡ್ ನಟ ಸಂಜಯ್ ದತ್, 'ಈಗ' ನಿರ್ಮಾಪಕ ಸಾಯಿ ಕೊರಪ್ಪಾಟಿ, ಬಿ-ಟೌನ್ ವಿತರಕ ಅನಿಲ್ ಥಡಾನಿ ಸಮ್ಮುಖದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.

published on : 22nd October 2022

ಅಲ್ಪಸಂಖ್ಯಾತ ಸಮುದಾಯಗಳು ಸೇರಿದಂತೆ ಜಾಗತಿಕ ಮಾನವ ಹಕ್ಕುಗಳನ್ನು ರೂಪಿಸುವ ಜವಾಬ್ದಾರಿ ಭಾರತಕ್ಕಿದೆ: ವಿಶ್ವಸಂಸ್ಥೆ ಮುಖ್ಯಸ್ಥ ಗುಟೆರಸ್

ಅಲ್ಪಸಂಖ್ಯಾತ ಸಮುದಾಯಗಳು ಸೇರಿದಂತೆ ಜಾಗತಿಕ ಮಾನವ ಹಕ್ಕುಗಳನ್ನು ರೂಪಿಸುವ ಜವಾಬ್ದಾರಿ ಭಾರತಕ್ಕಿದೆ ಎಂದು ಭಾರತಕ್ಕೆ ಆಗಮಿಸಿರುವ ವಿಶ್ವಸಂಸ್ಥೆ ಮುಖ್ಯಸ್ಥ ಅಂಟೋನಿಯೋ ಗುಟೆರಸ್ ಹೇಳಿದ್ದಾರೆ.

published on : 19th October 2022

ವಕೀಲರಿಗೆ ಪಾರ್ಕಿಂಗ್ ಹಕ್ಕು ಕುರಿತ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್!

ಕೋರ್ಟ್ ಆವರಣದೊಳಗೆ ವಕೀಲರು ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡುವ ಹಕ್ಕನ್ನು ಹೊಂದಿರುವುದಿಲ್ಲ ಎಂದು ರಾಜ್ಯ ಹೈಕೋರ್ಟ್ ಹೇಳಿದೆ. ಈ ಸಂಬಂಧ ವಕೀಲ ಎನ್.ಎಸ್. ವಿಜಯನಾಥ್ ಬಾಬು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದೆ.

published on : 2nd October 2022

ಕವಿತಾ ಲಂಕೇಶ್ ನಿರ್ದೇಶನದ ‘ಗೌರಿ’ ಸಾಕ್ಷ್ಯ ಚಿತ್ರಕ್ಕೆ ಬೆಸ್ಟ್‌ ಹ್ಯೂಮನ್‌ ರೈಟ್ಸ್‌ ಚಿತ್ರ ಪ್ರಶಸ್ತಿ

ಸಾಮಾಜಿಕ ಹೋರಾಟಗಾರ್ತಿ, ಪತ್ರಕರ್ತೆ ಗೌರಿ ಲಂಕೇಶ್‌ ಅವರ ಜೀವನವನ್ನು ಆಧರಿಸಿ ಕವಿತಾ ಲಂಕೇಶ್‌ ಅವರು ನಿರ್ದೇಶಿಸಿರುವ ಸಾಕ್ಷ್ಯಚಿತ್ರ 'ಗೌರಿ' ಅತ್ಯುತ್ತಮ ಮಾನವ ಹಕ್ಕುಗಳ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ.

published on : 21st September 2022

ಮಾನವ ಹಕ್ಕುಗಳ ಹೋರಾಟಗಳಿಗೆ ಈಗ ಕಷ್ಟದ ಸಮಯ: ಆಕಾರ್ ಪಟೇಲ್

ಭಾರತದಲ್ಲಿ ಈಗ ಸಾಮಾನ್ಯ ಮಾನವ ಹಕ್ಕು ಕಾರ್ಯಗಳನ್ನು ನಡೆಸುವುದು ಕಷ್ಟಕರವಾಗಿದೆ ಎಂದು ಪತ್ರಕರ್ತ ಮತ್ತು ಲೇಖಕ ಆಕಾರ್ ಪಟೇಲ್ ಶನಿವಾರ ಅಭಿಪ್ರಾಯಪಟ್ಟಿದ್ದಾರೆ.

published on : 4th September 2022

ಅಭಿಷೇಕ್ ಅಂಬರೀಷ್ ನಟನೆಯ 'ಬ್ಯಾಡ್ ಮ್ಯಾನರ್ಸ್' ಆಡಿಯೋ ಬೃಹತ್ ಮೊತ್ತಕ್ಕೆ ಸೇಲ್!

ಸೂರಿ ನಿರ್ದೇಶನದ ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್ ಮ್ಯಾನರ್ಸ್ ರಿಲೀಸ್ ಗೂ ಮುನ್ನವೇ ಸದ್ದು ಮಾಡುತ್ತಿದೆ. ಚಿತ್ರದ ಸಂಗೀತ ಹಕ್ಕುಗಳನ್ನು ಆನಂದ್ ಆಡಿಯೊ ಸಂಸ್ಥೆಯು 1 ಕೋಟಿ ರೂಪಾಯಿಗೆ ಪಡೆದುಕೊಂಡಿದೆ.

published on : 24th August 2022

'ಲಕ್ಕಿ ಮ್ಯಾನ್' ವಿತರಣೆ ಹಕ್ಕು ಪಡೆದ 'ವಿಕ್ರಾಂತ್ ರೋಣ' ನಿರ್ಮಾಪಕ ಜಾಕ್ ಮಂಜುನಾಥ್!

ವಿಕ್ರಾಂತ್ ರೋಣ ಸಿನಿಮಾ ನಿರ್ಮಾಪಕ  ಮಂಜುನಾಥ್ ಗೌಡ (ಜಾಕ್ ಮಂಜು) ಲಕ್ಕಿ ಮ್ಯಾನ್‌ನ ಕರ್ನಾಟಕ ವಿತರಣಾ ಹಕ್ಕನ್ನು ಪಡೆದಿದ್ದಾರೆ. ತಮಿಳು ಚಿತ್ರ ಓಹ್ ಮೈ ಕಡವುಲೆ ಸಿನಿಮಾ ಸ್ಫೂರ್ತಿಯಿಂದ ಲಕ್ಕಿ ಮ್ಯಾನ್ ತಯಾರಿಸಲಾಗಿದೆ.

published on : 20th August 2022

ನನಗೆಷ್ಟು ಹಕ್ಕು ಇದೆಯೋ ನಿಮಗೂ ಅಷ್ಟೇ ಹಕ್ಕು ಇದೆ: ಹಿಂದೂಗಳಿಗೆ ಬಾಂಗ್ಲಾ ಪ್ರಧಾನಿ

ಬಾಂಗ್ಲಾ ದೇಶದಲ್ಲಿರುವ ಹಿಂದೂ ಸಮುದಾಯಕ್ಕೆ ನನಗೆ ಇರುವ ಹಕ್ಕುಗಳೇ ಇವೆ ಎಂದು ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.

published on : 19th August 2022

ಹಕ್ಕುಗಳನ್ನು ರಕ್ಷಿಸುವುದು ಅಪರಾಧವಲ್ಲ: ತೀಸ್ತಾ ಸೆತಲ್ವಾಡ್ ಪರ ಧ್ವನಿ ಎತ್ತಿದ ವಿಶ್ವಸಂಸ್ಥೆ ಅಧಿಕಾರಿ!

ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ಕಾರ್ಯಕರ್ತೆ ತೀಸ್ತಾ ಸೆತಲ್ವಾಡ್ ಬಂಧನವನ್ನು ಖಂಡಿಸಿದ್ದು, ಮಾನವ ಹಕ್ಕುಗಳನ್ನು ರಕ್ಷಿಸುವುದು ಅಪರಾಧವಲ್ಲ ಎಂದು ಹೇಳಿದ್ದಾರೆ.

published on : 26th June 2022

ಐಪಿಎಲ್ ಮಾಧ್ಯಮ ಹಕ್ಕು 48,390 ಕೋಟಿ ರೂ. ಗೆ ಮಾರಾಟ: ಸ್ಟಾರ್ ಇಂಡಿಯಾ, ವಯಾಕಾಮ್ 18, ಟೈಮ್ಸ್ ಇಂಟರ್‌ನೆಟ್‌ ಪಾಲು!

ಐದು ವರ್ಷಗಳ ಐಪಿಎಲ್ ಮಾಧ್ಯಮ ಹಕ್ಕುಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಬರೋಬ್ಬರಿ 48,390 ಕೋಟಿ(6.20 ಶತಕೋಟಿ ಡಾಲರ್)ಗೆ ಮಾರಾಟ ಮಾಡುವ ಮೂಲಕ ಐಪಿಎಲ್ ಜಗತ್ತಿನ ಶ್ರೀಮಂತ ಕ್ರಿಕೆಟ್ ಟೂರ್ನಿ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ.

published on : 14th June 2022

ಐಪಿಎಲ್ ಟಿವಿ ಮತ್ತು ಡಿಜಿಟಲ್ ಹಕ್ಕುಗಳು ದಾಖಲೆಯ 44,075 ಕೋಟಿ ರೂ. ಗೆ ಮಾರಾಟ!

ಜಗತ್ತಿನ ಶ್ರೀಮಂತ ಕ್ರಿಕೆಟ್ ಟೂರ್ನಿ ಐಪಿಎಲ್ ನ ಟಿವಿ ಮತ್ತು ಡಿಜಿಟಲ್ ಹಕ್ಕುಗಳು ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಇದರಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಬೊಕ್ಕಸಕ್ಕೆ ಭಾರಿ ಮೊತ್ತ ಹರಿದು ಬಂದಿದೆ.

published on : 13th June 2022

2023-2027ರ ಐಪಿಎಲ್ ಟಿವಿ, ಡಿಜಿಟಲ್ ಹಕ್ಕು ದಾಖಲೆಯ 43,050 ಕೋಟಿ ರೂ. ಗೆ ಮಾರಾಟ?

2023 ರಿಂದ 2027ರವರೆಗಿನ 5 ವರ್ಷಗಳ ಐಪಿಎಲ್ ಟೂರ್ನಿಗಳ ಟಿವಿ, ಡಿಜಿಟಲ್ ಹಕ್ಕು ಮಾರಾಟದ ಹರಾಜು ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ದಾಖಲೆಯ 43,050 ಕೋಟಿ ರೂಗೆ ಹಕ್ಕು ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ.

published on : 13th June 2022
1 2 3 > 

ರಾಶಿ ಭವಿಷ್ಯ