ಪಾಕ್ ಮೂಲದ ಇಬ್ಬರು ಲಷ್ಕರ್ ಉಗ್ರರ ಬಂಧನ: ಭಾರತೀಯ ಸೇನೆ

ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ಮೂಲದ ಇಬ್ಬರು ಉಗ್ರರನ್ನು ಬಂಧಿಸಿರುವುದಾಗಿ ಭಾರತೀಯ ಸೇನೆ ಬುಧವಾರ ಹೇಳಿದೆ.
ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲಾನ್
ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲಾನ್

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ಮೂಲದ ಇಬ್ಬರು ಉಗ್ರರನ್ನು ಬಂಧಿಸಿರುವುದಾಗಿ ಭಾರತೀಯ ಸೇನೆ ಬುಧವಾರ ಹೇಳಿದೆ.

ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುತ್ತಿದ್ದ ವಿಧಿ 370ರ ರದ್ಧತಿ ಬಳಿಕ ಕಣಿವೆ ರಾಜ್ಯದಲ್ಲಿ ಪಾಕಿಸ್ತಾನ ಸೇನೆಯ ಪ್ರಾಯೋಜಿತ ಉಗ್ರರ ಒಳ ನುಸುಳುವಿಕೆ ಹೆಚ್ಚಾಗಿದ್ದು, ಅದರಂತೆ ಇದೀಗ ಭಾರತೀಯ ಗಡಿಯೊಳಗೆ ಒಳ ನುಸುಳಲು ಯತ್ನಿಸುತ್ತಿದ್ದ ಇಬ್ಬರು ಉಗ್ರರನ್ನು ಭಾರತೀಯ ಸೈನಿಕರು ವಶಕ್ಕೆ ಪಡೆದಿದ್ದಾರೆ. ಬಂಧಿತ ಉಗ್ರರು ಪಾಕಿಸ್ತಾನ ಮೂಲದ ಕುಖ್ಯಾತ ಉಗ್ರ ಸಂಘಟನೆ ಲಷ್ಕರ್​ ಎ ತೊಯ್ಬಾದ ಭಯೋತ್ಪಾದನೆ ಸಂಘಟನೆಗೆ ಸೇರಿದವರಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಸೇನೆ, 'ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಆಗಸ್ಟ್ 21 ರಂದು ಭಾರತದೊಳಗೆ ನುಗ್ಗಲು ಇವರಿಬ್ಬರೂ ಯತ್ನಿಸಿದ್ದರು. ಆಗ ಅವರನ್ನು ಬಂಧಿಸಲಾಯಿತು. ಇವರಿಬ್ಬರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ತಾವು ಲಷ್ಕರ್​ ಭಯೋತ್ಪಾದನೆಯ ಸದಸ್ಯರು ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ತಾವು ಪಾಕಿಸ್ತಾನದ​ ನಿವಾಸಿಗಳು ಎಂದು ಅವರು ಖಚಿತಪಡಿಸಿರುವುದಾಗಿ ಲೆಫ್ಟಿನೆಂಟ್ ಜನರಲ್ ಕೆಜೆಎಸ್​ ಧಿಲ್ಲೋನ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಅಂತೆಯೇ ಸೇನೆ ಭಯೋತ್ಪಾದಕ ತಪ್ಪೊಪ್ಪಿಗೆ ವಿಡಿಯೋವನ್ನು ಕೂಡ ಬಿಡುಗಡೆ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com