ಅರುಣಾಚಾಲಪ್ರದೇಶದಲ್ಲಿ ಚೀನಾ ಅತಿಕ್ರಮಣ: ತಪ್ಪು ಮಾಹಿತಿ ನೀಡಿದರಾ ಬಿಜೆಪಿ ಸಂಸದ?

ಅರುಣಾಚಲ ಪ್ರದೇಶದಲ್ಲಿ ಚೀನಾದಿಂದ ಅತಿಕ್ರಮಣ ನಡೆದಿದೆ ಎಂಬ ಬಿಜೆಪಿ ಸಂಸದ ತಪಿರ್ ಗಾವೋ ಹೇಳಿಕೆಯನ್ನು ಭಾರತೀಯ ಸೇನೆ ತಳ್ಳಿಹಾಕಿದೆ. 
ಅರುಣಾಚಾಲಪ್ರದೇಶದಲ್ಲಿ ಚೀನಾ ಅತಿಕ್ರಮಣ: ತಪ್ಪು ಮಾಹಿತಿ ನೀಡಿದರಾ ಬಿಜೆಪಿ ಸಂಸದ?
ಅರುಣಾಚಾಲಪ್ರದೇಶದಲ್ಲಿ ಚೀನಾ ಅತಿಕ್ರಮಣ: ತಪ್ಪು ಮಾಹಿತಿ ನೀಡಿದರಾ ಬಿಜೆಪಿ ಸಂಸದ?
Updated on: 

ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಚೀನಾದಿಂದ ಅತಿಕ್ರಮಣ ನಡೆದಿದೆ ಎಂಬ ಬಿಜೆಪಿ ಸಂಸದ ತಪಿರ್ ಗಾವೋ ಹೇಳಿಕೆಯನ್ನು ಭಾರತೀಯ ಸೇನೆ ತಳ್ಳಿಹಾಕಿದೆ. 

ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದ ಬಿಜೆಪಿ ಸಂಸದ ತಪಿರ್ ಗಾವೋ, ಅರುಣಾಚಲ ಪ್ರದೇಶದ ಎಲ್ಎಸಿ ಯಲ್ಲಿ ಚೀನಾ 60 ಕಿ.ಮೀ ವರೆಗೂಅತಿಕ್ರಮಣ ಮಾಡಿದೆ ಎಂದು ಹೇಳಿದ್ದರು. ಸಂಸದರು ನೀಡಿರುವ ಮಾಹಿತಿಯನ್ನು ಅಲ್ಲಗಳೆದಿರುವ ಭಾರತೀಯ ಸೇನೆ ಈ ರೀತಿಯ ಯಾವುದೇ ಅತಿಕ್ರಮಣವೂ ಸಂಭವಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ. 

ಪ್ರತಿ ವರ್ಷವೂ ಚೀನಾದ ಸೇನೆ ಭಾರತದ ಪ್ರದೇಶದಲ್ಲಿ ಅತಿಕ್ರಮಣ ಮಾಡುತ್ತದೆ ಎಂದು ಸಂಸದರು ಹೇಳಿದ್ದರು.ಭಾರತೀಯ ಸೇನೆ ಸ್ಪಷ್ಟನೆ ನೀಡಿದ ಬಳಿಕ ಸಂಸದ ಫೇಸ್ ಬುಕ್ ಪೋಸ್ಟ್ ನ್ನು ತೆಗೆದುಹಾಕಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com