ಚಂದ್ರಯಾನ-2
ಚಂದ್ರಯಾನ-2

ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವುದು ಹೇಗೆ?

ಚಂದ್ರಯಾನ-2 ಗಗನನೌಕೆಯನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸುವ ವಾಹಕ ವಿಕ್ರಮ್ ಸಂಯೋಜಿತ ಮಾದರಿಯಲ್ಲಿ ಕನಿಷ್ಠ 8 ಉಪಕರಣಗಳನ್ನು ಹೊತ್ತೊಯ್ಯುತ್ತದೆ.  

ಬೆಂಗಳೂರು: ಚಂದ್ರಯಾನ-2 ಗಗನನೌಕೆಯನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸುವ ವಾಹಕ ವಿಕ್ರಮ್ ಸಂಯೋಜಿತ ಮಾದರಿಯಲ್ಲಿ ಕನಿಷ್ಠ 8 ಉಪಕರಣಗಳನ್ನು ಹೊತ್ತೊಯ್ಯುತ್ತದೆ. 

ವಿಕ್ರಮ್ ವಾಹಕದೊಳಗೆ ಪ್ರಜ್ಞ್ಯಾನ ರೋವರ್ ಇಂದು ಕಳೆದು ಮಧ್ಯರಾತ್ರಿಯಾಗುತ್ತಿದ್ದಂತೆ 1 ಗಂಟೆಯಿಂದ 2.30ರೊಳಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ. ಇದಕ್ಕೂ ಮೊದಲು ಈ ಪ್ರಕ್ರಿಯೆ ಹೇಗೆ ನಡೆಯಲಿದೆ ಎಂಬುದನ್ನು ಇಸ್ರೊ ಈಗಾಗಲೇ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ತಿಳಿಸಿದೆ.

ಚಂದ್ರನ ಮೇಲ್ಮೈ ಮೇಲೆ ಸುಲಭವಾಗಿ ಇಳಿಯಲು ಉಡಾವಣಾ ವಾಹಕದಲ್ಲಿ ಮೂರು ಕ್ಯಾಮರಾಗಳನ್ನು ಅಳವಡಿಸಲಾಗಿದೆ, ಅವುಗಳು ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮರಾ(ಎಲ್ ಪಿಡಿಸಿ), ಲ್ಯಾಂಡರ್ ಹಾರಿಝಾಂಟಲ್ ವೆಲೊಸಿಟಿ ಕ್ಯಾಮರಾ(ಎಲ್ ಎಚ್ ವಿಸಿ) ಮತ್ತು ಲ್ಯಾಂಡರ್ ಹಸರ್ಡಸ್ ಡಿಟೆಕ್ಷನ್ ಅಂಡ್ ಅವೈಡೆನ್ಸ್ ಕ್ಯಾಮರಾ(ಎಲ್ಎಚ್ ಡಿಎಸಿ).


ಗಗನನೌಕೆ ಚಂದ್ರನಲ್ಲಿ ಇಳಿದ ಕೂಡಲೇ ಇಸ್ರೊ ಮೂರು ಪೇ ಲೋಡ್ ಗಳಾದ ಚೇಸ್ಟ್, ರಂಬಾ ಮತ್ತು ಇಸ್ಲಾವನ್ನು ನಿಯೋಜಿಸುತ್ತದೆ. ಲ್ಯಾಂಡರ್ ನಲ್ಲಿ 800ಎನ್ ಲಿಕ್ವಿಡ್ ಥ್ರಸ್ಟರ್ ಎಂಜಿನ್ಗಳು, ಟಚ್ಡೌನ್ ಸಂವೇದಕಗಳು ಮತ್ತು ಸೌರ ಫಲಕಗಳಿರುತ್ತದೆ. 

Related Stories

No stories found.

Advertisement

X
Kannada Prabha
www.kannadaprabha.com