ಮೀರತ್: ಶಾಲೆಯ ಮೇಚ್ಛಾವಣಿ ಕುಸಿದಿದ್ದು, ಹಲವರಿಗೆ ಗಾಯಗಳಾಗಿ, 6 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೀರತ್ ನಲ್ಲಿ ನಡೆದಿದೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸರಸ್ವತಿ ಗ್ಯಾನ್ ಮಂದಿರ್ ನಲ್ಲಿ ಈ ಘಟನೆ ನಡೆದಿದ್ದು, ತರಗತಿಗಳು ನಡೆಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನೆ ನಡೆಯುವುದಕ್ಕೆ ಕಾರಣವಾಗಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ ಪಿ ರಾಮ್ ಅರ್ಜ್ ಹೇಳಿದ್ದಾರೆ.
Advertisement