ಕರ್ತವ್ಯ ನಿರತ ಸೈನಿಕರಿಂದಲೇ ಶಸ್ತ್ರಾಸ್ತ್ರ ಕಸಿದ ಉಗ್ರರು ಪರಾರಿ, ಕರ್ಫ್ಯೂ ಜಾರಿ

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮಿತಿ ಮೀರಿದ ಉಗ್ರರ ಆಟಾಟೋಪ

ಶ್ರೀನಗರ: ಕರ್ತವ್ಯ ನಿರತ ಸೈನಿಕರಿಂದಲೇ ಶಸ್ತ್ರಾಸ್ತ್ರ ಕಸಿದ ಪರಾರಿಯಾಗಿದ್ದು, ಸ್ಥಳದಲ್ಲಿ ಕರ್ಫ್ಯೂ ಹೇರಲಾಗಿದೆ.

ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಪಿಡಿಪಿ ಮುಖಂಡ ಶೇಖ್ ನಾಸಿರ್ ಭದ್ರತೆಗಾಗಿ ನಿಯೋಜನೆಯಾಗಿದ್ದ ಸೈನಿಕ ತನ್ನ ಕರ್ತವ್ಯ ನಿರತನಾಗಿದ್ದಾಗ ಮುಖಂಡನ ಬೆಂಬಲಿಗರ ಗುಂಪಿನಲ್ಲಿದ್ದ ಶಂಕಿತ ಉಗ್ರರು ಸೈನಿಕರ ಬಂದೂಕು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇದೀಗ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಕರ್ಫ್ಯೂ ಹೇರಲಾಗಿದೆ.

ಸೇನಾ ಮೂಲಗಳು ತಿಳಿಸಿರುವಂತೆ ಸೈನಿಕನ ಒಂದು ಎಕೆ 47 ಬಂದೂಕನ್ನು ಶಂಕಿತ ಉಗ್ರರು ಕಸಿದಿದ್ದು, ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾನೆ. ಪರಾರಿಯಾಗಿರುವ ಉಗ್ರನಿಗಾಗಿ ಸೇನೆ ತೀವ್ರ ಶೋಧ ನಡೆಸಿದ್ದು, ಸೈನಿಕರ ಶೋಧಕಾರ್ಯಕ್ಕೆ ಸ್ಥಳೀಯ ಪೊಲೀಸರು ಕೂಡ ಸಾಥ್ ನೀಡಿದ್ದಾರೆ. ಸುತ್ತಮುತ್ತಲ ಪ್ರದೇಶಗಳಲ್ಲಿ ಇದೀಗ ನಾಕಾಬಂದಿ ಹಾಕಲಾಗಿದ್ದು, ಈ ವರ್ಷದಲ್ಲಿ ನಡೆದ 2ನೇ ಕೃತ್ಯವಾಗಿದೆ. ಈ ಹಿಂದೆ ಅಂದರೆ ಮಾರ್ಚ್ 8ರಂದು ಮುಸುಕುಧರಿಸಿದ್ದ ಉಗ್ರರು ಶಾಹಿಗ್ ಮಜಾರ್ ಪ್ರಾಂತ್ಯದ ಪಿಎಸ್ ಒ ದಲೀಪ್ ಕುಮಾರ್ ಅವರ ಮನೆಯಲ್ಲಿನ ಭದ್ರತಾ ಸಿಬ್ಬಂದಿಯಿಂದ ಬಂದೂಕು ಕಸಿದಿದ್ದ ಉಗ್ರರು ಒಂದು ಎಕೆ 47 ಬಂದೂಕು ಮತ್ತು 90 ಬುಲೆಟ್ ಗಳೊಂದಿಗೆ ಪರಾರಿಯಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com