ಉ.ಪ್ರ; ಬುರ್ಖಾ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಕಾಲೇಜು ಒಳಗೆ ಪ್ರವೇಶಿಸಲು ನಕಾರ 

ಬುರ್ಖಾ ಧರಿಸಿದ ಮುಸ್ಲಿಂ ಹುಡುಗಿಯರಿಗೆ ಕಾಲೇಜಿನ ತರಗತಿಯೊಳಗೆ ಪ್ರವೇಶಿಸಲು ನಿರಾಕರಿಸಿದ ಘಟನೆ ಫಿರ್ಜೋಬಾದ್ ನ ಎಸ್ ಆರ್ ಕೆ ಕಾಲೇಜಿನಲ್ಲಿ ನಡೆದಿದೆ. 
ಬುರ್ಖಾ ಧರಿಸಿದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿರುವುದು
ಬುರ್ಖಾ ಧರಿಸಿದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿರುವುದು

ಲಕ್ನೊ: ಬುರ್ಖಾ ಧರಿಸಿದ ಮುಸ್ಲಿಂ ಹುಡುಗಿಯರಿಗೆ ಕಾಲೇಜಿನ ತರಗತಿಯೊಳಗೆ ಪ್ರವೇಶಿಸಲು ನಿರಾಕರಿಸಿದ ಘಟನೆ ಫಿರ್ಜೋಬಾದ್ ನ ಎಸ್ ಆರ್ ಕೆ ಕಾಲೇಜಿನಲ್ಲಿ ನಡೆದಿದೆ.


ಇದು ಕಾಲೇಜಿನ ಸಮವಸ್ತ್ರದ ಭಾಗವಾಗಿಲ್ಲದಿರುವುದರಿಂದ ಬುರ್ಖಾ ಧರಿಸುವುದಕ್ಕೆ ನಿಷೇಧ ಹೇರಲಾಗಿದೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.


ಕಾಲೇಜಿಗೆ ಬರುವಾಗ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಗುರುತು ಕಾರ್ಡ್ ನೊಂದಿಗೆ ಬರಬೇಕೆಂಬುದು ಹಿಂದಿನಿಂದಲೂ ಇರುವ ನಿಯಮ. ಕಾಲೇಜಿನಲ್ಲಿ ಪ್ರವೇಶ ಪ್ರಕ್ರಿಯೆ ನಡೆಯುತ್ತಿರುವುದರಿಂದ ಇದನ್ನು ಕಡ್ಡಾಯವಾಗಿ ಅನುಸರಿಸುತ್ತಿರಲಿಲ್ಲ ವಿದ್ಯಾರ್ಥಿಗಳು, ಈಗ ಪ್ರವೇಶ ಪ್ರಕ್ರಿಯೆ ಮುಗಿದಿರುವುದರಿಂದ ನಿಯಮ ಕಡ್ಡಾಯ ಮಾಡಿದ್ದೇವೆ ಎಂದರು.


ಮೊನ್ನೆ ಅಂದರೆ ಸೆಪ್ಟೆಂಬರ್ 11ರ ನಂತರ ಯೂನಿಫಾರ್ಮ್ ಮತ್ತು ಐಡಿ ಕಾರ್ಡು ಇಲ್ಲದ ವಿದ್ಯಾರ್ಥಿಗಳನ್ನು ಕಾಲೇಜಿನೊಳಗೆ ಬಿಡುವುದಿಲ್ಲ. ವಸ್ತ್ರ ಸಂಹಿತೆಯಡಿ ಬುರ್ಖಾ ಸೇರಿಲ್ಲ, ಕಾಲೇಜು ನಿರ್ಧರಿಸಿದ ಸಮವಸ್ತ್ರದಲ್ಲಿಯೇ ವಿದ್ಯಾರ್ಥಿಗಳು ತರಗತಿಗೆ ಬರಬೇಕಾಗುತ್ತದೆ ಎಂದು ಪ್ರಾಂಶುಪಾಲ ಪ್ರಭಾಕರ್ ರೈ ತಿಳಿಸಿದ್ದಾರೆ.


ನಿನ್ನೆ ಬುರ್ಖಾ ಧರಿಸಿ ಕಾಲೇಜಿನೊಳಗೆ ಬಂದಿದ್ದ ಹೆಣ್ಣು ಮಕ್ಕಳಿಗೆ ಒಳಗೆ ಬಿಡಲಿಲ್ಲ. ಆದರೆ ವಿದ್ಯಾರ್ಥಿಗಳು ಹೇಳುವುದೇ ಬೇರೆ, ಹಿಂದೆ ಹೀಗೆ ಇರಲಿಲ್ಲ. ಈ ನಿಯಮ ಕಡ್ಡಾಯ ಇರಲಿಲ್ಲ ಎನ್ನುತ್ತಾರೆ. 


ಜಿಲ್ಲಾಧಿಕಾರಿ ಚಂದ್ರ ವಿಜಯ್ ಸಿಂಗ್ ಅವರನ್ನು ಕೇಳಿದರೆ, ಇದು ಕಾಲೇಜಿಗೆ ಸಂಬಂಧಿಸಿದ ಆಂತರಿಕ ವಿಷಯ. ಘಟನೆ ನಡೆದಿದ್ದು ನನ್ನ ಗಮನಕ್ಕೆ ಬಂದಿದೆ ಎಂದರು. ಇನ್ನು ಬುರ್ಖಾ ಧರಿಸಿದ್ದನ್ನು ತೆಗೆಯುವಂತೆ ಹೆಣ್ಣು ಮಕ್ಕಳಿಗೆ ಒತ್ತಾಯಿಸಲಾಗಿತ್ತು ಎಂಬುದನ್ನು ಅವರು ನಿರಾಕರಿಸಿದರು.


ಹೆಣ್ಣು ಮಕ್ಕಳು ಬುರ್ಖಾ ತೆಗೆಯಿರಿ ಎಂದು ಕಾಲೇಜು ಆಡಳಿತ ಮಂಡಳಿ ಹೇಳಿಲ್ಲ, ನೀವು ಬುರ್ಖಾ ಧರಿಸಿ ಬರಬಾರದು, ಕಾಲೇಜಿನ ಯೂನಿಫಾರ್ಮ್ ನಲ್ಲಿ ಬರಬೇಕೆಂದು ಹೇಳಿದೆಯಷ್ಟೆ ಎಂದಿದ್ದಾರೆ ಸಿಂಗ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com