ಹಿಂದಿ ಹೇರಿಕೆ: ಭಾರತದಲ್ಲಿ 'ಸಾಮಾನ್ಯ ಭಾಷೆ'ಯ ಪರಿಕಲ್ಪನೆ ಸಾಧ್ಯವಿಲ್ಲ-ರಜನಿಕಾಂತ್

ಭಾರತದಲ್ಲಿ ಒಂದೇ ಸಾಮಾನ್ಯ ಭಾಷೆ ಬಳಕೆಯ ಪರಿಕಲ್ಪನೆ ಸಾಧ್ಯವಿಲ್ಲ ಎಂದು ಸೂಪರ್‌ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.ಅಲ್ಲದೆ ಹಿಂದಿ ಹೇರಿಕೆಯನ್ನು ಕೇವಲ ದಕ್ಷಿಣದ ರಾಜ್ಯಗಳಷ್ಟೇ ವಿರೋಧಿಸುವುದಿಲ್ಲ ಬದಲಾಗಿ ಉತ್ತರದ ಅನೇಕರು ಸಹ ಅದನ್ನು ಬೆಂಬಲಿಸುವುದಿಲ್ಲ ಎಂದಿದ್ದಾರೆ.
ಅಮಿತ್ ಶಾ ಹಾಗೂ ರಜನಿಕಾಂತ್ (ಫೈಲ್ ಚಿತ್ರ)
ಅಮಿತ್ ಶಾ ಹಾಗೂ ರಜನಿಕಾಂತ್ (ಫೈಲ್ ಚಿತ್ರ)
Updated on

ಚೆನ್ನೈ: ಭಾರತದಲ್ಲಿ ಒಂದೇ ಸಾಮಾನ್ಯ ಭಾಷೆ ಬಳಕೆಯ ಪರಿಕಲ್ಪನೆ ಸಾಧ್ಯವಿಲ್ಲ ಎಂದು ಸೂಪರ್‌ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.ಅಲ್ಲದೆ ಹಿಂದಿ ಹೇರಿಕೆಯನ್ನು ಕೇವಲ ದಕ್ಷಿಣದ ರಾಜ್ಯಗಳಷ್ಟೇ ವಿರೋಧಿಸುವುದಿಲ್ಲ ಬದಲಾಗಿ ಉತ್ತರದ ಅನೇಕರು ಸಹ ಅದನ್ನು ಬೆಂಬಲಿಸುವುದಿಲ್ಲ ಎಂದಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾಇತ್ತೀಚೆಗೆ ಹಿಂದಿಯನ್ನು ಭಾರತದ ಸಾಮಾನ್ಯ ಭಾಷೆಯನ್ನಾಗಿ ಮಾಡಬೇಕೆಂದು ಹೇಳಿದ್ದರು.

ಸಾಮಾನ್ಯ ಭಾಷೆಯ ಪರಿಕಲ್ಪನೆ ಭಾರತದಲ್ಲಿ "ಸಾಧ್ಯವಿಲ್ಲ"ದ ಕಾರಣ ಹಿಂದಿ ಹೇರಿಕೆ ಮಾಡಬಾರದು ಎಂದು ರಜನಿಕಾಂತ್ ಹೇಳಿದ್ದಾರೆ.

"ಸಾಮಾನ್ಯ ಭಾಷೆ ಭಾರತಕ್ಕೆ ಮಾತ್ರವಲ್ಲ, ಯಾವುದೇ ದೇಶದ  ಏಕತೆ ಮತ್ತು ಪ್ರಗತಿಗೆ ಒಳ್ಳೆಯದು. ದುರದೃಷ್ಟವಶಾತ್,ನಮ್ಮ ದೇಶದಲ್ಲಿ  ಒಂದು ಸಾಮಾನ್ಯ ಭಾಷೆಯನ್ನು ಬಳಕೆಗೆ ತರಲು ಸಾಧ್ಯವಿಲ್ಲ. ಆದ್ದರಿಂದ ನೀವು ಯಾವುದೇ ಭಾಷೆಯನ್ನು ಹೇರಲು ಆಗುವುದಿಲ್ಲ"ಚೆನ್ನೈನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಜನಿಕಾಂತ್ ಹೇಳಿದ್ದಾರೆ.

"ವಿಶೇಷವಾಗಿ, ನೀವು ಹಿಂದಿ ಹೇರಿಕೆ ಮಾಡಿದ್ದರೆ ತಮಿಳುನಾಡು ಮಾತ್ರವಲ್ಲ, ದಕ್ಷಿಣದ ಯಾವುದೇ ರಾಜ್ಯಗಳು ಅದನ್ನು ಸ್ವೀಕರಿಸುವುದಿಲ್ಲ. ಅಷ್ತೇ ಅಲ್ಲದೆ ಉತ್ತರದ ಭಾಗಗಳಲ್ಲಿನ ಅನೇಕ ರಾಜ್ಯಗಳು ಸಹ ಅದಕ್ಕೆ ವಿರುದ್ಧವಾಗಿದೆ" ಎಂದು ಅವರು ಹೇಳಿದರು

ಕಳೆದ ಶನಿವಾರ ಶಾ ಹಿಂದಿ ದಿವಸ್ ಸಮಾವೇಶದಲ್ಲಿ ಮಾತನಾಡಿ ಭಾರತದಲ್ಲಿ ಬಹುಸಂಖ್ಯಾತರು ಹಿಂದಿ ಭಾಷೆ ಮಾತನಾಡುತ್ತಾರೆ. ಹಾಗಾಗಿ ಹಿಂದಿಯನ್ನು ದೇಶದ ಸಾಮಾನ್ಯ ಭಾಷೆಯಾಗಿ ಗುರುತಿಸುವ ಮೂಲಕ  ದೇಶದ ಐಕ್ಯತೆಗೆ ಹೆಗ್ಗುರುತಾಗಿಸಬಹುದು ಎಂದಿದ್ದರು. ಅಲ್ಲದೆ ದೇಶದ ನಾನಾ ಬಾಗಗಳಲ್ಲಿ ಹಿಂದಿ ಜನಪ್ರಿಯಗೊಳಿಸುವ ಸಲುವಾಗಿ ಪ್ರಯತ್ನಗಳನ್ನು ಕೈಗೊಳ್ಲಲಾಗುತ್ತದೆ ಎಂದಿದ್ದರು. 

ಶಾ ಅವರ ಈ ಹೇಳಿಕೆ ವ್ಯಾಪಕವಾಗಿ ಟೀಕೆಗೆ ಗುರಿಯಾಗಿವೆ, ವಿಶೇಷವಾಗಿ ತಮಿಳುನಾಡಿನಲ್ಲಿ, ಬಿಜೆಪಿಯ ಮಿತ್ರಪಕ್ಷವಾದ ಎಐಎಡಿಎಂಕೆ ಸಹ ರಾಜ್ಯದಲ್ಲಿ ಹಿಂದಿ ಹೇರಿದರೆ ಮಾತ್ರ "ಪ್ರತಿಕೂಲ ಪರಿಸ್ಥಿತಿ" ನಿರ್ಮಾಣವಾಗಲಿದೆ ಎಂದಿದೆ.ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಹ  ಕನ್ನಡ ತಮ್ಮ ರಾಜ್ಯದ ಪ್ರಮುಖ ಭಾಷೆ ಮತ್ತು ಅದರ ಪ್ರಾಮುಖ್ಯತೆ ವಿಚಾರವಾಗಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com