ಕೇರಳ ಬಂಪರ್ ಲಾಟರಿ: ರಾತ್ರೋರಾತ್ರಿ ಕೋಟ್ಯಧಿಪತಿಗಳಾದ ಆರು ಸೇಲ್ಸ್ ಮನ್ ಗಳು!

ಕೇರಳ ಲಾಟರಿ ಇಲಾಖೆ ಗುರುವಾರ ತಿರು ಓಣಂ ಬಂಪರ್ ಬಹುಮಾನ ಘೋಷಿಸಿದ್ದು, ಆರು ಸೇಲ್ಸ್ ಮನ್ ಗಳು  ರಾತ್ರೋರಾತ್ರಿ ಕೋಟ್ಯಧಿಪತಿಗಳಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತಿರುವನಂತಪುರಂ: ಕೇರಳ ಲಾಟರಿ ಇಲಾಖೆ ಗುರುವಾರ ತಿರು ಓಣಂ ಬಂಪರ್ ಬಹುಮಾನ ಘೋಷಿಸಿದ್ದು, ಆರು ಸೇಲ್ಸ್ ಮನ್ ಗಳು  ರಾತ್ರೋರಾತ್ರಿ ಕೋಟ್ಯಧಿಪತಿಗಳಾಗಿದ್ದಾರೆ.

ಕೇರಳ ಲಾಟರಿ ಇಲಾಖೆ ಬಂಪರ್ ಲಾಟರಿಯ ಫಲಿತಾಂಶ ಪ್ರಕಟಿಸಿದ್ದು, 6 ಮಂದಿಯ ಅದೃಷ್ಟ ಖುಲಾಯಿಸಿದೆ. ಇದರಲ್ಲಿ ಮೊದಲ ಬಹುಮಾನದ ಮೊತ್ತ 12 ಕೋಟಿ ರೂಪಾಯಿ. ಈ ಮೆಗಾ ಬಹುಮಾನ ಟಿಕೆಟ್ ನಂ.ಟಿಎಂ 160869ಕ್ಕೆ ಅದೃಷ್ಟ ಒಲಿದಿದೆ.

12 ಕೋಟಿ ಬಹುಮಾನ ಮೊತ್ತ ಘೋಷಣೆಯಾದ ನಂತರ ಸುದ್ದಿ ಹರಿದಾಡುವ ಮೂಲಕ ಕೊನೆಗೂ ವಿಜೇತ ವ್ಯಕ್ತಿ ಯಾರು ಎಂಬುದು ಬಯಲಾಗಿತ್ತು. ಈ ಟಿಕೆಟ್ ಅನ್ನು ಒಟ್ಟು ಆರು ಮಂದಿ ಹಣ ಹಂಚಿಕೊಂಡು ಖರೀದಿಸಿದ್ದರು.

ಕೊಲ್ಲಂ ಜಿಲ್ಲೆಯ ಕರುನಾಗಪಲ್ಲಿ ಪ್ರದೇಶದ ಚುನ್ ಗಾಥ್ ಜ್ಯುವೆಲ್ಲರಿಯಲ್ಲಿ ಸೇಲ್ಸ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಾಜೀವ್, ರಾಮ್ ಜಿಮ್, ರೋನಿ, ವಿವೇಕ್, ಸಾಬಿನ್ ಹಾಗೂ ರಾತೀಶ್ 12 ಕೋಟಿ ಬಹುಮಾನ ಗೆದ್ದ ಸಂಭ್ರಮದಲ್ಲಿದ್ದಾರೆ.

ನಮಗೆ ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ.. ನಾವು ಕೋಟ್ಯಧೀಶರಾಗಿಬಿಟ್ಟಿದ್ದೇವೆ! ನಾವು ಆರು ಮಂದಿ ಒಟ್ಟು ಸೇರಿ ಟಿಕೆಟ್ ಖರೀದಿಸಿದ್ದೇವು. ಇದೀಗ ನಾವು ಆರು ಮಂದಿ ಬಂದ ಹಣದಲ್ಲಿ ಸಮಾನವಾಗಿ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.

ನಮಗೆ ತಲಾ ಒಂದೊಂದು ಕೋಟಿ ರೂಪಾಯಿ ಬಹುಮಾನ ಸಿಗುತ್ತದೆ. ಮೊದಲ ಬಹುಮಾನ ವಿಜೇತರಿಗೆ ಎಲ್ಲಾ ತೆರಿಗೆ ಕಡಿತಗೊಂಡು ಒಟ್ಟು 7.5 ಕೋಟಿ ರೂಪಾಯಿ ಮೊತ್ತ ಸಿಗಲಿದೆ. ನಮಗೆ ತುಂಬಾ ಸಾಲಗಳಿದ್ದು, ಅದನ್ನು ತೀರಿಸುತ್ತೇವೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com