ಪಿ.ಚಿದಂಬರಂ
ಪಿ.ಚಿದಂಬರಂ

ಪಿ.ಚಿದಂಬರಂ ಭೇಟಿ ಮಾಡಿದ ಸೋನಿಯಾ: ಡಿಕೆಶಿಗಿಲ್ಲ ಕಾಂಗ್ರೆಸ್ ಅಧಿನಾಯಕಿ ದರ್ಶನ ಭಾಗ್ಯ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ತಿಹಾರ್ ಜೈಲಿಗೆ ಆಗಮಿಸಿದ ಅವರು ಕೇವಲ ಪಿ. ಚಿದಂಬರಂ ಅವರನ್ನು ಭೇಟಿಯಾಗಲಷ್ಟೇ ಸಾಧ್ಯವಾಯಿತು. ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಲು ಕೈ ಅಧಿನಾಯಕಿಗೆ ಅವಕಾಶ ಸಿಗಲಿ

ನವದೆಹಲಿ:  ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರನ್ನು ತಿಹಾರ ಜೈಲಿನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭೇಟಿಯಾಗಿದ್ದಾರೆ.

ಲ್ಲಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ತಿಹಾರ್ ಜೈಲಿಗೆ ಆಗಮಿಸಿದ ಅವರು ಕೇವಲ ಪಿ. ಚಿದಂಬರಂ ಅವರನ್ನು ಭೇಟಿಯಾಗಲಷ್ಟೇ ಸಾಧ್ಯವಾಯಿತು. ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಲು ಕೈ ಅಧಿನಾಯಕಿಗೆ ಅವಕಾಶ ಸಿಗಲಿ. 

ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಸೆರೆವಾಸದಲ್ಲಿದ್ದರೆ, ಕರ್ನಾಟಕದ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಅಕ್ರಮ ಹಣ ವರ್ಗಾವಣೆ, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನವನ್ನೆದುರಿಸುತ್ತಿದ್ದಾರೆ. ನಿಮ್ಮ ಜತೆ ನಾವಿದ್ದೇವೆ ಎಂದು ಹೇಳಿ ನೈತಿಕ ಸ್ಥೈರ್ಯ ತುಂಬಲು ಸೋನಿಯಾ ಜೈಲಿಗೆ ಭೇಟಿ ನೀಡಿದ್ದರು ಎನ್ನಲಾಗಿದೆ. 

ಸೋನಿಯಾ ಗಾಂಧಿ ಅವರು ತಿಹಾರ ಜೈಲಿನ ತೆರಳಿ ಪಿ ಚಿದಂಬರಂ ಅವರನ್ನು ಭೇಟಿ ಮಾಡಿದ್ದಕ್ಕೆ  ಕಾರ್ತಿ ಚಿದಂಬರಂ ಸಂತಸ ವ್ಯಕ್ತ ಪಡಿಸಿದ್ದಾರೆ, ಸೋನಿಯಾ ಗಾಂಧಿ ಭೇಟಿಯಿಂದಾಗಿ ನಮ್ಮ ರಾಜಕೀಯ ಹೋರಾಟಕ್ಕೆ ಮತ್ತಷ್ಟು ನೈತಿಕ ಬೆಂಬಲ ಸಿಕ್ಕಿದಂತಾಗಿದೆ ಎಂದು  ಕಾರ್ತಿ ಚಿದಂಬರಂ ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com