ದುಬಾರಿ ದಂಡ ಆಯ್ತು, ಈಗ ಸಾರಿಗೆ ಸಚಿವಾಲಯದಿಂದ ಹಳೆಯ ವಾಹನಗಳ ನಿಷೇಧಿಸುವ 'ಗುಜುರಿ ಕಾಯ್ದೆ' ಜಾರಿ!

ಸಂಚಾರಿ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸುವ ಮೂಲಕ ವಾಹನ ಸವಾರರ ಕೆಂಗಣ್ಣಿಗೆ ಗುರಿಯಾಗಿರುವ ಕೇಂದ್ರ ಸಾರಿಗೆ ಸಚಿವಾಲಯ ಇದೀಗ ಹಳೆಯ ವಾಹನಗಳ ಮೇಲೆ ನಿಷೇಧ ಹೇರಲು ಗಂಭೀರ ಚಿಂತನೆಯಲ್ಲಿ ತೊಡಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

15 ವರ್ಷ ಹಳೆಯ ಪೆಟ್ರೋಲ್ ಮತ್ತು 10 ವರ್ಷ ಹಳೆಯ ಡೀಸೆಲ್ ವಾಹನಗಳ ನಿಷೇಧಕ್ಕೆ ಕೇಂದ್ರ ಗಂಭೀರ ಚಿಂತನೆ

ನವದೆಹಲಿ: ಸಂಚಾರಿ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸುವ ಮೂಲಕ ವಾಹನ ಸವಾರರ ಕೆಂಗಣ್ಣಿಗೆ ಗುರಿಯಾಗಿರುವ ಕೇಂದ್ರ ಸಾರಿಗೆ ಸಚಿವಾಲಯ ಇದೀಗ ಹಳೆಯ ವಾಹನಗಳ ಮೇಲೆ ನಿಷೇಧ ಹೇರಲು ಗಂಭೀರ ಚಿಂತನೆಯಲ್ಲಿ ತೊಡಗಿದೆ.

ಹೌದು.. ಮೂಲಗಳ ಪ್ರಕಾರ ಪರಿಸರದ ಮೇಲೆ ಪರಿಣಾಮ ಬೀರುವ ಹಳೆಯ ವಾಹನಗಳನ್ನು ನಿಷೇಧಿಸುವ ಕುರಿತು ಕೇಂದ್ರ ಸಾರಿಗೆ ಸಚಿವಾಲಯ ಮುಂದಾಗಿದ್ದು. ಇದಕ್ಕಾಗಿ ಗುಜರಿ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದೆ. ಅದರಂತೆ 15 ವರ್ಷ ಹಳೆಯ ಪೆಟ್ರೋಲ್ ಮತ್ತು 10 ವರ್ಷ ಹಳೆಯ ಡೀಸೆಲ್ ವಾಹನಗಳ ನಿಷೇಧಕ್ಕೆ ಸಚಿವಾಲಯ ಮುಂದಾಗಿದೆ. 

ಈ ಕುರಿತಂತೆ ಮಾಧ್ಯಮವೊಂದು ವರದಿ ಮಾಡಿದ್ದು, ರಸ್ತೆ ಸಾರಿಗೆ ಸಚಿವಾಲಯವು ಸಿದ್ಧಪಡಿಸುತ್ತಿರುವ ವಾಹನ ರದ್ದು ನೀತಿಗೆ ಈಗಾಗಲೇ ಹಣಕಾಸು ಸಚಿವಾಲಯದಿಂದ ಗ್ರೀನ್ ಸಿಗ್ನಲ್ ದೊರೆತಿದೆ ಮತ್ತು ಹೆಚ್ಚಿನ ಅನುಮತಿಗಾಗಿ ಇತ್ತೀಚೆಗೆ ಪ್ರಧಾನಿ ಕಚೇರಿಗೂ ಕಳುಹಿಸಲಾಗಿದೆ. ಪಿಎಂಒ ಕೂಡ ಇದಕ್ಕೆ ಒಪ್ಪಿಗೆ ನೀಡಲು ಮುಂದಾಗಿದೆ ಎನ್ನಲಾಗಿದೆ. 

ಈ ಹೊಸ ನೀತಿ ಅನ್ವಯ 15 ವರ್ಷ ಹಳೆಯ ಪೆಟ್ರೋಲ್ ವಾಹನಗಳು ಮತ್ತು 10 ವರ್ಷ ಹಳೆಯ ಡೀಸೆಲ್ ವಾಹನಗಳನ್ನು ರಸ್ತೆಗಳಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ. ಅಲ್ಲದೆ ಮರು ನೋಂದಣಿ ಶುಲ್ಕವನ್ನು ಹಲವಾರು ಹಂತಗಳಿಂದ ಹೆಚ್ಚಿಸಲು ಸಹ ಇದು ಶಿಫಾರಸು ಮಾಡುತ್ತದೆ. 15 ವರ್ಷಗಳಿಂದ ಚಾಲನೆಯಲ್ಲಿರುವ ವಾಹನವು ಮರು ನೋಂದಣಿಗೆ ಮಾಡಿಸಿಕೊಳ್ಳಬೇಕು ಇದಕ್ಕಾಗಿ ಖಾಸಗಿ ನಾಲ್ಕು ಚಕ್ರಗಳ ವಾಹನದ ಮರು ನೋಂದಣಿಯು ಪ್ರಸ್ತುತ 600 ರೂ.ನಿಂದ 15,000 ರೂ.ಗಳವರೆಗೆ ಆಗಬಹುದು ಎಂದು ಮೂಲಗಳು ತಿಳಿಸಿವೆ. 

ನಿಧಾನಗತಿಯಲ್ಲಿ ಸಾಗಿರುವ ವಾಹನ ವಲಯದ ಉತ್ತೇಜನಕ್ಕೂ ಇದು ನೆರವು
ಇನ್ನು ನಿಧಾನಗತಿಯಲ್ಲಿ ಸಾಗುತ್ತಿರುವ ವಾಹನ ವಲಯವನ್ನು ವೃದ್ದಿಸುವ ನಿಟ್ಟಿನಲ್ಲಿ ಈಗ ಕೇಂದ್ರ ಸಚಿವ ಸಂಪುಟ ಸದ್ಯದಲ್ಲೇ ವಾಹನವನ್ನು ರದ್ದುಗೊಳಿಸುವ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದೆ ಎನ್ನಲಾಗಿದೆ. ಕೇಂದ್ರ ಸರ್ಕಾರದ ಈ ನಡೆಯಿಂದಾಗಿ ಮತ್ತೆ ವಾಹನ ವಲಯ ಸುಧಾರಿಸಬಹುದು ಎನ್ನಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com