ಮಸೂದ್ ಅಜರ್
ಮಸೂದ್ ಅಜರ್

ಆತ್ಮಾಹುತಿ ದಾಳಿಗೆ ಜೈಷೆ ಉಗ್ರ ಸಂಘಟನೆ ಹೊಸ ಹೆಸರಿನಲ್ಲಿ ಸಜ್ಜು

ಪಾಕ್ ಮೂಲದ ಭಯೋತ್ಪಾದಕ ಸಂಘಟನೆ ಜೈಷ್ - ಎ ಮೊಹಮ್ಮದ್ ಸಂಘಟನೆ ತನ್ನ ಹೆಸರು ಬದಲಾಯಿಸಿಕೊಂಡು ಭಾರತದ ಮೇಲೆ ದಾಳಿಗೆ ಸಜ್ಜಾಗಿದೆ
Published on

ನವದೆಹಲಿ: ಪಾಕ್ ಮೂಲದ ಭಯೋತ್ಪಾದಕ ಸಂಘಟನೆ ಜೈಷ್ - ಎ ಮೊಹಮ್ಮದ್ ಸಂಘಟನೆ ತನ್ನ ಹೆಸರು ಬದಲಾಯಿಸಿಕೊಂಡು ಭಾರತದ ಮೇಲೆ ದಾಳಿಗೆ ಸಜ್ಜಾಗಿದೆ

ವಿಶೇಷವಾಗಿ ಸೇನಾ  ಪಡೆ ಮತ್ತು ಪೊಲೀಸ್ ನೆಲೆಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡಲು 30 ಜನರ ಆತ್ಮಾಹುತಿ  ತಂಡವನ್ನು ರಚಿಸಿಕೊಂಡಿದೆ ಎಂದು ಬೇಹುಗಾರಿಕೆ ಮೂಲಗಳಿಂದ ಗೊತ್ತಾಗಿದೆ.
  
ಜಿಹಾದಿ ತರಬೇತಿ ಚಟುವಟಿಕೆಗಳ ಬಗ್ಗೆ ಜೈಷ್ ಸಂಘಟನೆ ಜಾಗತಿಕ ಕೋಪಕ್ಕೆ ತುತ್ತಾಗಿದೆ.  ಇದರಿಂದ ಬಚಾವಾಗಲು  ಕಾಶ್ಮೀರದ ಸ್ವಾತಂತ್ರ್ಯ ಹೋರಾಟದ ಹೆಸರಿನಲ್ಲಿ ತನ್ನ ಹೆಸರನ್ನು ಬದಲಿಸಿಕೊಂಡಿದೆ ಎನ್ನಲಾಗಿದೆ. 

ಜಾಗತಿಕ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದ ಹಿನ್ನೆಲೆಯಲ್ಲಿ ಆತನ ಕಿರಿಯ ಸಹೋದರ ಮುಫ್ತಿ ಅಬ್ದುಲ್ ಆಸ್ಕರ್ ಈಗ ಸಂಘಟನೆಯ ನೇತೃತ್ವ ವಹಿಸಿಕೊಂಡು ದಾಳಿಗೆ ಮುಂದಾಗಿದ್ದಾನೆ  ಎನ್ನಲಾಗಿದೆ.

ಪಾಕಿಸ್ತಾನದಲ್ಲಿನ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ 30 ಮಂದಿಯ ಆತ್ಮಾಹುತಿ ದಾಳಿಕೋರರ ತಂಡ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಪ್ರಮುಖ ಸೇನಾ ನೆಲೆಗಳು, ಮಿಲಿಟರಿ ವಸತಿ ಪ್ರದೇಶಗಳು ಹಾಗೂ ಪೊಲೀಸ್ ವಾಹನಗಳ ಮೇಲೆ ಗುರಿಯಾಗಿಸಿಕೊಂಡು ದಾಳಿ ಮಾಡಿ ಅಪಾರ ಪ್ರಮಾಣದ ರಕ್ತಪಾತ ಹರಿಸುವುದು ನಂತರ ಮೂಲಕ ವಿಶ್ವಮಟ್ಟದಲ್ಲಿ ಸುದ್ದಿ ಮಾಡುವುದು ಮತ್ತು ಭಾರತದ ಹೆಸರಿಗೆ ಮಸಿಬಳಿಯುವುದು ಸಹ ಈ  ಸಂಘಟನೆಯ  ತಂಡದ ಗುರಿಯಾಗಿದೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com