ಭಗತ್ ಸಿಂಗ್ ಜನ್ಮದಿನ: ಉಪ ರಾಷ್ಟ್ರಪತಿ, ಪ್ರಧಾನಿ ಗೌರವ ನಮನ

ಶಹೀದ್ ಭಗತ್ ಸಿಂಗ್ ಅವರಿಗೆ ಜನ್ಮ ದಿನದ ಅಂಗವಾಗಿ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಶನಿವಾರ ಗೌರವ ನಮನ ಸಲ್ಲಿಸಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಶಹೀದ್ ಭಗತ್ ಸಿಂಗ್ ಅವರಿಗೆ ಜನ್ಮ ದಿನದ ಅಂಗವಾಗಿ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಶನಿವಾರ ಗೌರವ ನಮನ ಸಲ್ಲಿಸಿದರು.

ಈ ಬಗ್ಗೆ ಟ್ವಿಟ್ ಮಾಡಿರುವ ಉಪ ರಾಷ್ಟ್ರಪತಿ, ಶ್ರೇಷ್ಟ್ರ ದೇಶಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮ ದಿನದಂದು ಅವರಿಗೆ ಗೌರವ ಸಲ್ಲಿಸಲು ನಾನು ಕೂಡ ರಾಷ್ಟ್ರದೊಂದಿಗೆ ಕೈಜೋಡಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಅವರ ಶೌರ್ಯ ಮತ್ತು ಧೈರ್ಯ ಅಪಾರವಾದುದು. ದೇಶದ ಸ್ವಾತಂತ್ರ್ಯಕ್ಕಾಗಿ ಅವರು ಮಾಡಿದ ದೊಡ್ಡ ತ್ಯಾಗವು ಪ್ರತಿಯೊಬ್ಬ ಭಾರತೀಯನಿಗೂ ಎಲ್ಲ ಸಮಯದಲ್ಲೂ ಸ್ಫೂರ್ತಿ ನೀಡುತ್ತಲೇ ಇರುತ್ತದೆ. ರಾಷ್ಟ್ರವು ಅಪ್ರತಿಮ ರಾಷ್ಟ್ರೀಯವಾದಿಗೆ ಎಂದೆಂದಿಗೂ ಕೃತಜ್ಞನಾಗಿರುತ್ತದೆ ಎಂದು ವೆಂಕಯ್ಯ ನಾಯ್ಡು ಟ್ವೀಟ್ ಮಾಡಿದ್ದಾರೆ.

ಪ್ರಧಾನ ಮಂತ್ರಿ ಟ್ವೀಟ್‌ನಲ್ಲಿ, ಶಹೀದ್ ಭಗತ್‌ಸಿಂಗ್ ಅವರ ಹೆಸರು ಶೌರ್ಯ ಮತ್ತು ತ್ಯಾಗದ ಸಮಾನಾರ್ಥಕವಾಗಿದೆ. ಅವರ ಧೈರ್ಯಶಾಲಿ ಕ್ರಮಗಳು ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತಲೇ ಇವೆ. ಅವರು ಯುವಕರ ಮನಸ್ಸಿನಲ್ಲಿ ಅತ್ಯಂತ ಜನಪ್ರಿಯರಾಗಿ ಇಂದಿಗೂ ಉಳಿದಿದ್ದಾರೆ. ಭಾರತದ ಸುಪುತ್ರನಾಗಿರುವ ಈ ಮಹಾನ್ ನಾಯಕನಿಗೆ ನಾನು ಅವರ ಜಯಂತಿಯ ಈ ದಿನದಂದು ನಮಸ್ಕರಿಸುತ್ತೇನೆ ಎಂದು ತಿಳಿಸಿದ್ದಾರೆ.

ಭಗತ್ ಸಿಂಗ್ ಒಬ್ಬ ಭಾರತೀಯ ಸಮಾಜವಾದಿ ಕ್ರಾಂತಿಕಾರಿಯಾಗಿದ್ದರು. ಭಾರತದಲ್ಲಿ ಬ್ರಿಟಿಷರ ವಿರುದ್ಧ ನಡೆದ ಎರಡು ಹಿಂಸಾಚಾರ ಪ್ರತಿಭಟನೆಯಲ್ಲಿ ಅವರನ್ನು 23 ನೇ ವಯಸ್ಸಿನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಪಡಿಸಲಾಯಿತು. ಅವರು ಭಾರತೀಯ ಸ್ವಾತಂತ್ರ್ಯ ಚಳವಳಿಯ ವೀರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂದಿಗೂ ಜಗತ್ತಿನ ಲಕ್ಷಾಂತರ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.

ಅಮಿತ್ ಶಾ, ರಾಜನಾಥ್ ಗೌರವ ಸಲ್ಲಿಕೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ 112ನೇ ಜನ್ಮ ದಿನಾಚರಣೆಯಂದು ಶಹೀದ್ ಭಗತ್ ಸಿಂಗ್ ಗೌರವ ಸಲ್ಲಿಸಿದರು. ಈ ಕುರಿತು ಟ್ವೀಟ್‌ ಮಾಡಿರುವ ಶಾ, ತಮ್ಮ ದೇಶಪ್ರೇಮದ ಮೂಲಕ, ಭಗತ್ ಸಿಂಗ್ ದೇಶಾದ್ಯಂತ ಒಂದು ಕಲ್ಪನೆಯನ್ನು ಹರಡಿದರು ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಪ್ರತಿಯೊಂದು ವಿಭಾಗಕ್ಕೂ ಪ್ರೇರಣೆ ನೀಡಿದರು. ಅವರ ಅದಮ್ಯ ಧೈರ್ಯ, ಆದರ್ಶಗಳು ಮತ್ತು ವಿಶಿಷ್ಟ ದೇಶಭಕ್ತಿಯಿಂದ ಹುತಾತ್ಮ ಭಗತ್ ಸಿಂಗ್ ಎಲ್ಲರಿಗೂ ಸ್ಫೂರ್ತಿಯಾದರು. ಭಗತ್ ಸಿಂಗ್ ಅವರ ಜನ್ಮ ವಾರ್ಷಿಕೋತ್ಸವದಂದು ನಾನು ಗೌರವ ಸಲ್ಲಿಸುತ್ತೇನೆ ಎಂದಿದ್ದಾರೆ.

''ಭಾರತದ ಧೀರ ಸ್ವಾತಂತ್ರ್ಯ ಹೋರಾಟಗಾರ ಶಹೀದ್ ಸರ್ದಾರ್ ಭಗತ್ ಸಿಂಗ್ ಅವರ ಜಯಂತಿಯಂದು ಧೈರ್ಯ ಮತ್ತು ತ್ಯಾಗವನ್ನು ನೆನಪಿಸಿಕೊಳ್ಳಬೇಕು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಕೊಡುಗೆ ಅಪಾರ. ಅವರ ಜಯಂತಿಯಂದು ನಾನು ಅವರಿಗೆ ನನ್ನ ಹೃತ್ಪೂರ್ವಕ ಗೌರವಗಳನ್ನು ಅರ್ಪಿಸುತ್ತೇನೆ ಎಂದು ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com