ರಮ್ಯಾಗೆ ಕೊಕ್, ಕಾಂಗ್ರೆಸ್ ಸಾಮಾಜಿಕ ಜಾಲತಾಣ ನೂತನ ಮುಖ್ಯಸ್ಥರಾಗಿ ರೋಹನ್ ಗುಪ್ತಾ ನೇಮಕ

ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರನ್ನು ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷೆ ಹುದ್ದೆಯಿಂದ ಅಧಿಕೃತವಾಗಿ ತೆಗೆದು ಹಾಕಲಾಗಿದ್ದು, ಅವರ ಸ್ಥಾನಕ್ಕೆ ಗುಜರಾತ್ ನ ರೋಹನ್ ಗುಪ್ತ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ.
ರಮ್ಯಾ - ರೋಹನ್ ಗುಪ್ತ
ರಮ್ಯಾ - ರೋಹನ್ ಗುಪ್ತ

ನವದೆಹಲಿ: ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರನ್ನು ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷೆ ಹುದ್ದೆಯಿಂದ ಅಧಿಕೃತವಾಗಿ ತೆಗೆದು ಹಾಕಲಾಗಿದ್ದು, ಅವರ ಸ್ಥಾನಕ್ಕೆ ಗುಜರಾತ್ ನ ರೋಹನ್ ಗುಪ್ತ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ.
 
ಈ ಕುರಿತು ಶನಿವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿಕೆ ಬಿಡುಗಡೆಗೊಳಿಸಿದ್ದು, ಪಕ್ಷದ ಹಂಗಾಮಿ ಅಧ್ಯಕ್ಷ ಸೋನಿಯಾ ಗಾಂಧಿ ಅವರು ಗುಪ್ತ ಹೆಸರನ್ನು ಅನುಮೋದಿಸಿದ್ದಾರೆ ಎಂದು ತಿಳಿಸಿದ್ದಾರೆ. 
 
ಜೊತೆಗೆ, ಪಕ್ಷದ ಕಿಸಾನ್ ಕಾಂಗ್ರೆಸ್ ವಿಭಾಗಕ್ಕೆ ಗುರುಸಿಮ್ರನ್ ಸಿಂಗ್ ಮಂಡ್ ಮತ್ತು ಬಾಬುರಾವ್ ಮುಂಡೆ ಅವರನ್ನು ಜಂಟಿ ಸಂಯೋಜಕರನ್ನಾಗಿ ನೇಮಿಸಿ ಪಕ್ಷ ಆದೇಶ ಹೊರಡಿಸಿದೆ.

2013ರಲ್ಲಿ ಮಂಡ್ಯ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ರಮ್ಯಾ  ಆರು ತಿಂಗಳ ಕಾಲ ಸಂಸದೆಯಾಗಿ ಕಾರ್ಯ ನಿರ್ವಹಿಸಿ, 2014ರ ಲೋಕಸಭಾ ಚುನಾವಣೆಯಲ್ಲಿ ಸೋಲುಂಡಿದ್ದರು. ಬಳಿಕ ರಾಜ್ಯ ರಾಜಕೀಯ ಬಿಟ್ಟು ದೆಹಲಿಗೆ ಹೋದರು. ರಾಹುಲ್​ ಗಾಂಧಿ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ರಮ್ಯಾ ಅವರನ್ನು ಸಾಮಾಜಿಕ ಜಾಲತಾಣದ ಮುಖ್ಯಸ್ಥರಾಗಿ ನೇಮಕಮಾಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com