ಪುಲ್ವಾಮ ಮಾದರಿಯ ದಾಳಿಗೆ ಯತ್ನಿಸಿದ್ದ ಶಂಕಿತ ಉಗ್ರನ ಬಂಧನ!

ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಸಿಆರ್ ಪಿಎಫ್ ವಾಹನದ ಮೇಲೆ ಪುಲ್ವಾಮ ಮಾದರಿಯ ದಾಳಿಗೆ ಯತ್ನಿಸಿದ್ದ ಶಂಕಿತ ಉಗ್ರನನ್ನು ಬಂಧಿಸಲಾಗಿದೆ.

Published: 01st April 2019 12:00 PM  |   Last Updated: 01st April 2019 04:13 AM   |  A+A-


Suspected terrorist who tried to pull off Pulwama-like attack on CRPF convoy arrested

ಪುಲ್ವಾಮ ಮಾದರಿಯ ದಾಳಿಗೆ ಯತ್ನಿಸಿದ್ದ ಶಂಕಿತ ಉಗ್ರನ ಬಂಧನ!

Posted By : SBV SBV
Source : Online Desk
ಜಮ್ಮು: ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಸಿಆರ್ ಪಿಎಫ್ ವಾಹನದ ಮೇಲೆ ಪುಲ್ವಾಮ ಮಾದರಿಯ ದಾಳಿಗೆ ಯತ್ನಿಸಿದ್ದ ಶಂಕಿತ ಉಗ್ರನನ್ನು ಬಂಧಿಸಲಾಗಿದೆ. 
 
ಬಂಧಿತ ಉಗ್ರನಿಂದ ವಶಪಡಿಸಿಕೊಳ್ಳಲಾದ ಚೀಟಿಯೊಂದರ ಮೂಲಕ ಆತ ಹಿಜ್ಬುಲ್‌ ಉಗ್ರ ಸಂಘಟನೆಗೆ ಸೇರಿರುವ ವ್ಯಕ್ತಿ ಎಂದು ತಿಳಿದುಬಂದಿದೆ.  

ಮಾ.30 ರಂದು ಜಮ್ಮು ಮತ್ತು ಶ್ರೀನಗರ ಹೆದ್ದಾರಿಯಲ್ಲಿ ಸಾಗುತ್ತಿದ್ದ ಸಿಆರ್ ಪಿಎಎಫ್  ವಾಹನಗಳ ಮೇಲೆ ಪುಲ್ವಾಮ ಮಾದರಿಯಲ್ಲಿ ಕಾರ್‌ ಬಾಂಬ್‌ ಸ್ಫೋಟಿಸಲು ವಿಫಲ ಯತ್ನ ನಡೆಸಲಾಗಿತ್ತು. ಈ ಕಾರು ಚಾಲಕನನ್ನು ಬಂಧಿಸುವಲ್ಲಿ ಸಫ‌ಲವಾಗಿರುವ ಪೊಲೀಸರುಆತನನ್ನು  ವಿಚಾರಣೆಗೆ ಒಳಪಡಿಸಿದ್ದಾರೆ. 

ವಿಫಲ ಯತ್ನ ನಡೆದಾಗ ಭದ್ರತಾ ಪಡೆಗಳು ತಪಾಸಣೆ ನಡೆಸಿದ್ದಾಗ ಸುಧಾರಿತ ಸ್ಪೋಟಕ ಉಪಕರಣಗಳು ದೊರೆತಿತ್ತು. 

ಮಾರ್ಚ್‌ 30ರಂದು ರಾಂಬನ್‌ ಜಿಲ್ಲೆಯ ತೆಥಾರ್‌ ಗ್ರಾಮದಲ್ಲಿ ಸಿ.ಆರ್‌.ಪಿ.ಎಫ್. ವಾಹನಗಳು ಸಾಗುತ್ತಿದ್ದ ಜಮ್ಮು – ಕಾಶ್ಮೀರ ಹೆದ್ದಾರಿಯಲ್ಲೇ ಜವಾಹರ್‌ ಸುರಂಗದ ಪಕ್ಕದಲ್ಲೇ ಕಾರೊಂದರಲ್ಲಿ ನಿಗೂಢ ನ್ಪೋಟ ಸಂಭವಿಸಿತ್ತು. ಸ್ಫೋಟ ನಡೆದ ತಕ್ಷಣ ಕಾರಿನ ಚಾಲಕ ಘಟನಾ ಸ್ಥಳದಲ್ಲಿ ಕಾರನ್ನು ಬಿಟ್ಟು ಪರಾರಿಯಾಗಿದ್ದ. 
Stay up to date on all the latest ರಾಷ್ಟ್ರೀಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp