ಮಾದರಿ ನೀತಿ ಸಂಹಿತೆಗೆ ಧಕ್ಕೆ: ರಫೇಲ್ ಒಪ್ಪಂದ ಕುರಿತ ತಮಿಳು ಪುಸ್ತಕಕ್ಕೆ ಚುನಾವಣಾ ಆಯೋಗ ನಿಷೇಧ

ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವ ಕಾರಣ ವಿವಾದಾತ್ಮಕ ರಾಫೆಲ್ ಫೈಟರ್ ಜೆಟ್ ಒಪ್ಪಂದದ ಕುರಿತ ಪುಸ್ತಿಕೆಯನ್ನು ಚುನಾವಣಾ ಆಯೋಗ ನಿಷೇಧಿಸಿದೆ.

Published: 02nd April 2019 12:00 PM  |   Last Updated: 02nd April 2019 09:04 AM   |  A+A-


Rafale fighter aircraft (File | PTI)

ಸಂಗ್ರಹ ಚಿತ್ರ

Posted By : RHN RHN
Source : The New Indian Express
ಚೆನ್ನೈ: ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವ ಕಾರಣ ವಿವಾದಾತ್ಮಕ ರಾಫೆಲ್ ಫೈಟರ್ ಜೆಟ್ ಒಪ್ಪಂದದ ಕುರಿತ ಪುಸ್ತಿಕೆಯನ್ನು ಚುನಾವಣಾ ಆಯೋಗ ನಿಷೇಧಿಸಿದೆ. 

ಹಿಂದೂ ಗ್ರೂಪ್ ನ ಮ್ಯಾನೇಜಿಂಗ್ ಡೈರೆಕ್ಟರ್ ಎನ್. ರಾಮ್ ನೇತೃತ್ವದಲ್ಲಿ ಬಿಡುಗಡೆಯಾಗಬೇಕಿದ್ದ ಪುಸ್ತಕವನ್ನು ಚುನಾವಣಾ ಆಯೋಗ ನಿಷೇಧಿಸಿ ಪುಇಸ್ತಕದ ಪ್ರತಿಗಳನ್ನು ಮುಟ್ಟುಗೋಲು ಹಾಕಿಕೊಂಡಿಎ.

ಲೇಖಕ ಎಸ್ ವಿಜಯನ್  ಅವರ ಕಛೇರಿಯ್ತಿಂದ ಪುಸ್ತಕದ 148 ಪ್ರತಿಗಳನ್ನು ಆಯೋಗ ವಶಕ್ಕೆ ಪಡೆಇದೆ."Rafale: A Scam That Rocked the Nation" ಶೀರ್ಷಿಕೆಯ ತಮಿಳು ಪುಸ್ತಕವನ್ನು ಬರೆದ ವಿಜಯನ್ ಅವರು ಚೆನ್ನೈ ಮೂಲದ ಭಾರತಿ ಪಬ್ಲಿಕೇಷನ್ಸ್ ಮೂಲಕ ಇದನ್ನು ಪ್ರಕಟಿಸಿದ್ದರು.

ಪುಸ್ತಕದ ಮುಟ್ಟುಗೋಲಿಗೆ ಸಂಬಂಧಿಸಿ ಮಾತನಾಡಿದ ಭಾರತಿ ಪಬ್ಲಿಕೇಷನ್ಸ್ ಸಂಪಾದಕ  ಪಿ.ಕೆ.ರಾಜನ್ "ನಾವು ಯಾವುದೇ ತನಿಖಾ ವರದಿಯನ್ನು ಸಿದ್ದಪಡಿಸಿದ್ದಲ್ಲ, ಲೇಖಕರು ಕೇವಲ ಆನ್ ಲೈನ್ ನಲ್ಲಿರುವ ಮಾಹಿತಿಯನ್ನಷ್ಟೇ ಆಧರಿಸಿ ಪುಸ್ತಕ ರಚಿಸಿದ್ದರು" ಎಂದರು.

ಇದೀಗ ಪುಸ್ತಕ ನಿಷೇಧವಾಗಿದ್ದು "ಅವರು ಸತ್ಯವನ್ನು ಜನರು ತಿಳಿಯುತ್ತಾರೆಂದು ಹೆದರಿದರು, ಅದಕ್ಕಾಗಿ ಪುಸ್ತಕ ನಿಷೇಧಿಸಿದ್ದಾರೆ. ಆದರೆ ತಮಿಳುನಾಡು ಜನರು ಸತ್ಯ ತಿಳಿಯದೇ ಬಿಡಲಾರರು" ಅವರು ಹೇಳೀದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp