ಸೇನೆಗೆ ಅವಮಾನಿಸಿದ ಆದಿತ್ಯನಾಥ್‍ಗೆ 'ಪ್ರೇಮಪತ್ರ' ಬರೆದ ಚುನಾವಣಾ ಆಯೋಗ: ಕಾಂಗ್ರೆಸ್ ಟೀಕೆ

ಭಾರತೀಯ ಸೇನೆಯನ್ನು "ಮೋದಿ ಸೇನೆ" ಎಂದು ಕರೆದಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.
ರಣದೀಪ್  ಸುರ್ಜೆವಾಲಾ
ರಣದೀಪ್ ಸುರ್ಜೆವಾಲಾ
ನವದೆಹಲಿ: ಭಾರತೀಯ ಸೇನೆಯನ್ನು "ಮೋದಿ ಸೇನೆ" ಎಂದು ಕರೆದಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ. ಆಯೋಗ ಯೋಗಿ ಅವರಿಗೆ ಪತ್ರ ಬರೆದು ಎಚ್ಚರಿಸಿದೆ. ಆದರೆ ಚುನಾವಣಾ ಆಯೋಗದ ಈ ಮೃದು ನಡೆಯನ್ನು ಟೀಕಿಸಿದ ಕಾಂಗ್ರೆಸ್ ಯೋಗಿ ಆದಿತ್ಯನಾಥ್ ಭಾರತೀಯ ಸೇನೆಗೆ ಅವಮಾನ ಮಾಡಿದ್ದಾರೆ. ಆದರೆ ಚುನಾವಣಾ ಆಯೋಗ ಅವರಿಗೆ 'ಪ್ರೇಮ ಪತ್ರ' ಬರೆದಿದೆ ಎಂದು ಟೀಕಿಸಿದೆ.
ಅದಲ್ಲದೆ ಕಾಂಗ್ರೆಸ್ ಪಕ್ಷದ ಉದ್ದೇಶಿತ ಯೋಜನೆ ಬಡವರಿಗೆ ಕನಿಷ್ಟ ಆದಾಯ ಖಾತ್ರಿ -ನ್ಯಾಯ್ ಗೆ ನೀತಿ ಆಯೋಗದ ಉಪಾಧ್ಯಕ್ಷ ರಾಹುಲ್ ಅವರು ಟೀಕಿಸಿದ್ದನ್ನು ಸಹ ಖಂಡಿಸಿದೆ. ನೀತಿ ಆಯೋಗದ ಉಪಾಧ್ಯಕ್ಷರ ಜತೆ ಆಯೋಗ ನಡೆಸಿದ ಸಂವಹನದ ವೇಳೆ "ಭವಿಷ್ಯದಲ್ಲಿ ಇಂತಹಾ ಟೀಕೆಗಳನ್ನು ಮಾಡಬೇಡಿ" ಎಂದು ಎಚ್ಚರಿಸಿತ್ತು.
"ಮಾದರಿ ನೀತಿ ಸಂಹಿತೆ ಈಗೇನಾದರೂ ಮೋದಿ ನೀತಿ ಸಂಹಿತೆಯಾಗಿದೆಯೆ? ಆದಿತ್ಯನಾಥ್ ಭಾರತೀಯ ಸೇನೆಗೆ ಅವಮಾನಿಸಿದ್ದಾರೆ, ಅದಕ್ಕೆ ಆಯೋಗ ಅವರಿಗೆ ಪ್ರೇಮ ಪತ್ರ ಬರೆದಿದೆ "ಎಂದು ಕಾಂಗ್ರೆಸ್ ಪ್ರಧಾನ ವಕ್ತಾರ ರಣದೀಪ್  ಸುರ್ಜೆವಾಲಾ ಹೇಳಿದ್ದಾರೆ.
ನೀತಿ ಆಯೋಗದ ಉಪಾಧ್ಯಕ್ಷ ನಮ್ಮ "ನ್ಯಾಯ್" ಯೋಜನೆ ಟೀಕಿಸಿದರೆ "ನೀವಿದನ್ನು ಭವಿಷ್ಯದಲ್ಲಿ ಮಾಡಬೇಡಿ" ಎಂದು ಎಚ್ಚರಿಕೆ ನೀಡಿದೆ.ಏಕೆ ಆಯೋಗವು ಇವರೆಲ್ಲರ ಮೇಲೆ ತೀವ್ರ ಕ್ರಮ ತೆಗೆದುಕೊಳ್ಲದೆ ಮೃದು ಧೋರಣೆ ತಳೆದಿದೆ? ಅವರು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com