ಲೋಕಸಭೆ ಚುನಾವಣೆಗೆ ಮುನ್ನ ಮಧ್ಯಪ್ರದೇಶ ಸಿಎಂ ಆಪ್ತನಿಗೆ ಐಟಿ ಶಾಕ್

ಭಾನುವಾರ ಬೆಳ್ಲಂಬೆಳಿಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೆ ಶಾಕ್ ಕೊಟ್ಟಿದ್ದಾರೆ.
ಕಮಲ್ ನಾಥ್
ಕಮಲ್ ನಾಥ್
ಭೋಪಾಲ್: ಭಾನುವಾರ ಬೆಳ್ಲಂಬೆಳಿಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೆ ಶಾಕ್ ಕೊಟ್ಟಿದ್ದಾರೆ. ಐಟಿ ಅಧಿಕಾರಿಗಳು ಕಮಲ್ ನಾಥ್ ಆಪ್ತನ ಮನೆ ಮೇಲೆ ದಾಳಿ ನಡಿಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಇಂದೋರ್ ನಲ್ಲಿರುವ ಕಮಲ್ ನಾಥ್ ಆಪ್ತ ಪ್ರವೀಣ್ ಕಕ್ಕರ್ ನಿವಾಸದ ಮೇಲೆ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಐಟಿ ದಾಳಿ ನಡೆದಿದೆ.
ಐಟಿ ಅಧಿಕಾರಿಗಳು ಐವತ್ತಕ್ಕೆ ಹೆಚ್ಚಿನ ಸ್ಥಳದಲ್ಲಿ ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಕಮಲ್ ನಾಥ್ ಅವರ ಓಎಸ್ ಡಿ ರತುಲ್ ಪುರಿ , ಭೋಲಾ, ಇಂದೋರ್, ಗೋವಾ ಹಾಗೂ ದೆಹಲಿಯ ಕೆಲ ಪ್ರದೇಶದಲ್ಲಿ ದಾಳಿ ನಡೆದಿದೆ ಎಂದು ಮೂಲಗಳು ಹೇಳಿದೆ.
ಕಕ್ಕರ್ ಮಾಜಿ ಪೋಲೀಸ್ ಅಧಿಕಾರಿಯಾಗಿದ್ದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಆಪ್ತನೆಂದು ಹೇಳಲಾಗಿದೆ. 2004 ರಲ್ಲಿ ಪೊಲೀಸ್ ಇಲಾಖೆಯಿಂದ ಸ್ವಯಂಪ್ರೇರಿತ ನಿವೃತ್ತಿಯನ್ನು ಪಡೆದುಕೊಂಡಿದ್ದ ಇವರ ಮೇಲೆ ನಕಲಿ ಎನ್ ಕೌಂಟರ್ ಪ್ರಕರಣದಡಿ ತನಿಖೆ ಕೈಗೊಳ್ಳಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com