ಪಾಕ್ ಪೈಲಟ್ಸ್ ರಫೇಲ್ ಯುದ್ಧ ವಿಮಾನ ಹಾರಾಟ ತರಬೇತಿ ವರದಿ ಸುಳ್ಳು: ಫ್ರಾನ್ಸ್ ರಾಯಭಾರಿ

2017ರಲ್ಲಿ ಪಾಕಿಸ್ತಾನ ವಾಯುಸೇನೆ ಪೈಲಟ್ಗಳು ರಫೇಲ್ ಯುದ್ಧ ವಿಮಾನ ಹಾರಾಟ ತರಬೇತಿ ಪಡೆದಿದ್ದಾರೆ ಎಂಬ ಮಾಧ್ಯಮ ವರದಿಗಳು ಸುಳ್ಳು ಎಂದು ಭಾರತದಲ್ಲಿರುವ ಫ್ರಾನ್ಸ್ ರಾಯಭಾರಿ ತಿಳಿಸಿದ್ದಾರೆ.
ರಫೇಲ್ ಜೆಟ್
ರಫೇಲ್ ಜೆಟ್
ನವದೆಹಲಿ: 2017ರಲ್ಲಿ ಪಾಕಿಸ್ತಾನ ವಾಯುಸೇನೆ ಪೈಲಟ್ಗಳು ರಫೇಲ್ ಯುದ್ಧ ವಿಮಾನ ಹಾರಾಟ ತರಬೇತಿ ಪಡೆದಿದ್ದಾರೆ ಎಂಬ ಮಾಧ್ಯಮ ವರದಿಗಳು ಸುಳ್ಳು ಎಂದು ಭಾರತದಲ್ಲಿರುವ ಫ್ರಾನ್ಸ್ ರಾಯಭಾರಿ ತಿಳಿಸಿದ್ದಾರೆ.
2019ರ ಫೆಬ್ರವರಿ 6ರಂದು ಫ್ರಾನ್ಸ್ ನ ಡಸಾಲ್ಟ್ ಏವಿಯೇಷನ್ ಸಂಸ್ಥೆಯು ಕತಾರ್ ಗೆ ರಫೇಲ್ ಯುದ್ಧ ವಿಮಾನಗಳನ್ನು ಪೂರೈಸಿದ್ದು, ಇದಕ್ಕೂ ಮೊದಲು 2017ರಲ್ಲಿ ಕತಾರ್ ನ ವಾಯುಸೇನೆಯ ತಂಡಕ್ಕೆ ನೀಡಿದ ರಫೇಲ್ ಹಾರಾಟ ತರಬೇತಿಯಲ್ಲಿ ಪಾಕಿಸ್ತಾನ ಪೈಲಟ್ಸ್ ಗಳು ತರಬೇತಿ ಪಡೆದಿದ್ದಾರೆ ಎಂದು ವೈಮಾನಿಕ ಕ್ಷೇತ್ರದ ಕುರಿತಷ್ಟೆ ವರದಿಗಳನ್ನು ಪ್ರಕಟಿಸುವ ಅಂತಾರಾಷ್ಟ್ರೀಯ ಮಟ್ಟದ ಆನ್ ಲೈನ್ ಸುದ್ದಿ ಸಂಸ್ಧೆ ainonline.com ಫೆ.13ರಂದು ವರದಿಯೊಂದನ್ನು ಪ್ರಕಟಿಸಿತ್ತು. 
ಈ ಕುರಿತು ವರದಿಗಳು ಭಾರತದಲ್ಲಿ ವರದಿಗಳು ಪ್ರಕಟವಾಗಿದ್ದವು ಈ ಬಗ್ಗೆ ಇಂದು ಟ್ವೀಟರ್ ನಲ್ಲಿ ಸ್ಪಷ್ಟನೆ ನೀಡರುವ ಭಾರತದಲ್ಲಿರುವ ಫ್ರಾನ್ಸ್ ನ ರಾಯಭಾರಿ ಅಲೆಕ್ಸಾಂಡರ್ ಕ್ಲೈಲರ್ ಇಂದೊಂದು ಸುಳ್ಳು ಸುದ್ದಿ ಎಂದಿದ್ದಾರೆ. ಇದರೊಂದಿಗೆ ರಫೇಲ್ ಯುದ್ಧ ವಿಮಾನ ಹಾರಾಟ ತರಬೇತಿಯನ್ನು ಪಾಕ್ ಪೈಲಟ್ಸ್ ಗಳು ಪಡೆದಿದ್ದಾರೆ ಎಂಬುದನ್ನು ಅವರು ತಳ್ಳಿ ಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com