ಎನ್.ಡಿ. ತಿವಾರಿ ಪುತ್ರ ರೋಹಿತ್ ತಿವಾರಿ ನಿಧನ

ಕಾಂಗ್ರೆಸ್ ನಾಯಕ ಎನ್ ಡಿ ತಿವಾರಿ ಅವರ ಪುತ್ರ ರೋಹಿತ್ ಶೇಖರ್ ತಿವಾರಿ(40) ಮಂಗಳವಾರ ಸಂಜೆ ಡಿಫೆನ್ಸ್ ಕಾಲೊನಿಯ ತನ್ನ ಮನೆಯಲ್ಲಿ ನಿಧನರಾದರು.

Published: 17th April 2019 12:00 PM  |   Last Updated: 17th April 2019 09:36 AM   |  A+A-


Rohit Shekhar Tiwar

ರೋಹಿತ್ ಶೇಖರ್ ತಿವಾರಿ

Posted By : RHN RHN
Source : The New Indian Express
ನವದೆಹಲಿ: ಕಾಂಗ್ರೆಸ್ ನಾಯಕ ಎನ್ ಡಿ ತಿವಾರಿ ಅವರ ಪುತ್ರ ರೋಹಿತ್ ಶೇಖರ್ ತಿವಾರಿ(40) ಮಂಗಳವಾರ ಸಂಜೆ ಡಿಫೆನ್ಸ್ ಕಾಲೊನಿಯ ತನ್ನ ಮನೆಯಲ್ಲಿ ನಿಧನರಾದರು. ರೋಹಿತ್ ಅವರ ಪತ್ನಿ ಈ ಬಗ್ಗೆ ಯಾವ ಪ್ರತಿಕ್ರಿಯೆ ನೀಡಿಲ್ಲ, ಮಂಗಳವಾರ ಸಂಜೆ 4.40ಕ್ಕೆ ಮಾಕ್ಸ್ ಆಸ್ಪತ್ರೆಯ ವೈದ್ಯರು ರೋಹಿತ್ ಮರಣವನ್ನು ದೃಢಪಡಿಸಿದ್ದಾರೆ ಎಂದು ದಕ್ಷಿಣ ವಲಯ ಡಿಸಿಪಿವಿಜಯ್ ಕುಮಾರ್ ಹೇಳಿದರು 

"ರೋಹಿತ್ ಮಲಗಿರುವಾಗಲೇ ಅವರ ಕೈಗಳು, ಕಾಲುಗಳು ತಣ್ಣಗಾಗಿರುವುದು, ಅವರ ಮೂಗಿನಲ್ಲಿ ರಕ್ತಸ್ರಾವವಾಗಿರುವುದನ್ನು ಅವರ ಪತ್ನಿ ಗಮನಿಸಿದ್ದರು.ರೋಹಿತ್ ಸ್ಪಂದಿಸುತ್ತಿಲ್ಲ ಎಂಬುದನ್ನು ಅರಿತಿದ್ದರು" ಕುಮಾರ್ ಹೇಳಿದರು ಆದರೆ ರೋಹಿತ್ ಸಾವಿಗೆ ಕುಟುಂಬವು ಕಾರಣವಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ರೋಹಿತ್ ಅವರಿಗೆ ಹೃದಯಸ ಸಮಸ್ಯೆ ಇತ್ತು. . "ನಾವು ತನಿಖೆಯನ್ನು ಪ್ರಾರಂಭಿಸಿದ್ದೇವೆ ಮತ್ತು ಸ್ಪಷ್ಟತೆಗಾಗಿ ಮರಣೋತ್ತರ ಪರೀಕ್ಷೆಗಳ ವರದಿ ಬರಬೇಕಿದೆ""ರೋಹಿತ್ ಅವರ ಸ್ಥಿತಿಯ ಬಗ್ಗೆ ಮನೆಯಿಂದ ಕರೆ ಬಂದಾಗ ಅವರ ತಾಯಿ ಉಜ್ಜಲಾ ತಿವಾರಿ ಈಗಾಗಲೇ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಪಡೆಯುತ್ತಿದ್ದರು.

 "ಅವರ (ರೋಹಿತ್) ಸಾವು ನೈಸರ್ಗಿಕವಾಗಿದೆ. ನನಗೆ ಸಂದೇಹವಿಲ್ಲ, ಆದರೆ ಯಾವ  ಕಾರಣಕ್ಕೆ ಅವರ ಸಾವಾಗಿದೆ ಎಂಬುದನ್ನು ಣಾನು ಸಮಯ ಬಂದಾಗ ತಿಳಿಸುವೆ" ಉಜ್ಜ್ವಾಲಾ ತಿವಾರಿ ಮಾಧ್ಯಮಕ್ಕೆ ಹೇಳೀಕೆ ನೀಡಿದ್ದಾರೆ.

ರೋಹಿತ್ ತಿವಾರಿ ತಂದೆ ಎನ್.ಡಿ. ತಿವಾರಿ ಕಳೆದ ಅಕ್ಟೋಬರ್ ನಲ್ಲಿ ಅಸುನೀಗಿದ್ದರು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp