ಹಾರಾಟ ಸ್ಥಗಿತಗೊಳಿಸಿದ ಜೆಟ್ ಏರ್‌ವೇಸ್ ಸಿಬ್ಬಂದಿಗೆ ಆಸರೆಯಾದ ಸ್ಪೈಸ್ ಜೆಟ್

ತೀವ್ರ ಆರ್ಥಿಕ ಆರ್ಥಿಕ ಸಂಕಷ್ಟದಿಂದ ಸಂಪೂರ್ಣ ಹಾರಾಟ ಸ್ಥಗಿತಗೊಳಿಸಿದ ಜೆಟ್ ಏರ್ ವೇಸ್ ನ ಸಿಬ್ಬಂದಿಗೆ ಸ್ಪೈಸ್ ಜೆಟ್ ಆಸರೆಯಾಗಿದ್ದು, ಪೈಲಟ್ ಗಳು, ಕ್ಯಾಬಿನ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ತೀವ್ರ ಆರ್ಥಿಕ ಆರ್ಥಿಕ ಸಂಕಷ್ಟದಿಂದ ಸಂಪೂರ್ಣ ಹಾರಾಟ ಸ್ಥಗಿತಗೊಳಿಸಿದ ಜೆಟ್ ಏರ್ ವೇಸ್ ನ ಸಿಬ್ಬಂದಿಗೆ ಸ್ಪೈಸ್ ಜೆಟ್ ಆಸರೆಯಾಗಿದ್ದು, ಪೈಲಟ್ ಗಳು, ಕ್ಯಾಬಿನ್ ಸಿಬ್ಬಂದಿ ಹಾಗೂ ತಾಂತ್ರಿಕ ಸಿಬ್ಬಂದಿ ಸೇರಿದಂತೆ 500 ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದೆ. ಈ ಪೈಕಿ ಬಹುತೇಕರ ಜೆಟ್ ಏರ್ ವೇಸ್ ಸಿಬ್ಬಂದಿಯಾಗಿದ್ದು, ಕಳೆದ ಮೂರು ನಾಲ್ಕು ತಿಂಗಳಿನಿಂದ ಸಂಬಳ ವಿಲ್ಲದೆ ಮತ್ತು ಇತ್ತೀಚಿಗೆ ಕೆಲಸ ಕಳೆದುಕೊಂಡಿದ್ದ ಸಿಬ್ಬಂದಿ ಸ್ಪೈಸ್ ಜೆಟ್ ಸಹಾಯ ಹಸ್ತ ಚಾಚಿದೆ.
ನಮ್ಮ ಸಂಸ್ಥೆಯ ಸೇವೆಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳುತ್ತಿದ್ದು, ಹಾರಾಟ ಸ್ಥಗಿತಗೊಳಿಸಿದ ಜೆಟ್ ಏರ್ ವೇಸ್ ಸಿಬ್ಬಂದಿಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ. ನಾವು ಈಗಾಗಲೇ 100ಕ್ಕೂ ಹೆಚ್ಚು ಪೈಲಟ್‌ಗಳು, 200ಕ್ಕೂ ಅಧಿಕ ಕ್ಯಾಬಿನ್ ಸಿಬ್ಬಂದಿ ಮತ್ತು 200ಕ್ಕೂ ಹೆಚ್ಚು ತಾಂತ್ರಿಕ ಮತ್ತು ವಿಮಾನ ನಿಲ್ದಾಣ ಸಿಬ್ಬಂದಿಗೆ ಉದ್ಯೋಗ ನೀಡಿದ್ದೇವೆ ಎಂದು ಸ್ಪೈಸ್ ಜೆಟ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಅವರು ಹೇಳಿದ್ದಾರೆ.
ನಿನ್ನೆಯಷ್ಟೇ ಸ್ಪೈಸ್ ಜೆಟ್, ಮುಂದಿನ ಎರಡು ವಾರಗಳಲ್ಲಿ ಹೊಸದಾಗಿ 27 ವಿಮಾನಗಳ ಸೇವೆ ಆರಂಭಿಸುವುದಾಗಿ ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com