ಕಾಂಗ್ರೆಸ್ ಬಹುಮತ ಪಡೆಯಲ್ಲ, ಮೈತ್ರಿ ಅತ್ಯವಶ್ಯಕ- ಕಮಲ್ ನಾಥ್

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆಯುವ ಸಾಧ್ಯತೆ ಕಡಿಮೆ ಇದ್ದು, ಕೇಂದ್ರದಲ್ಲಿ ಅಧಿಕಾರ ರಚಿಸಲು ಚುನಾವಣೆ ನಂತರವೂ ಮೈತ್ರಿ ಅಗತ್ಯವಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಹೇಳಿದ್ದಾರೆ.

Published: 21st April 2019 12:00 PM  |   Last Updated: 21st April 2019 04:43 AM   |  A+A-


KamalNath

ಕಮಲ್ ನಾಥ್

Posted By : ABN
Source : PTI
ಮಧ್ಯಪ್ರದೇಶ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆಯುವ ಸಾಧ್ಯತೆ ಕಡಿಮೆ ಇದ್ದು, ಕೇಂದ್ರದಲ್ಲಿ ಅಧಿಕಾರ ರಚಿಸಲು ಚುನಾವಣೆ ನಂತರವೂ ಮೈತ್ರಿ ಅಗತ್ಯವಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಹೇಳಿದ್ದಾರೆ.

ಬಿಜೆಪಿ ಬಹುಮತ ಪಡೆಯದಿದ್ದರೆ  ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ಅದನ್ನು ಹೊರತುಪಡಿಸಿದತೆ ಮೈತ್ರಿ ರಚನೆಗೆ ಇನ್ನಿತರ ದೊಡ್ಡ ರಾಜಕೀಯ ಪಕ್ಷಗಳಿಲ್ಲ ಎಂದು ಅವರು ಹೇಳಿದ್ದಾರೆ.

ನಾವು ಉತ್ತಮವಾದ ಕೆಲಸವನ್ನೇ ಮಾಡುತ್ತಿದ್ದೇವೆ. ಆದರೆ, ಬಹುಮತ ಗಳಿಸುವಲ್ಲಿ ವಿಫಲವಾದಲ್ಲಿ  ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇಡಲು ಮೈತ್ರಿ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದಿದ್ದಾರೆ.

ಪ್ರಸ್ತುತ ಬಿಜೆಪಿ ವಿರೋಧ, ಬಿಜೆಪಿ ಪರ ಎಂಬ ಎರಡು ವಿಧಗಳಿವೆ. ಬಿಜೆಪಿ ಪರ ಸಂಖ್ಯೆ ಕಡಿಮೆ ಇದೆ . ಆದರೆ, ಬಿಜೆಪಿ ವಿರೋಧಿ ಗುಂಪು  ಅದರ ರಾಜಕೀಯ ನೀತಿ ವಿರುದ್ಧವಾಗಿರುವುದಾಗಿ . ಕಾಂಗ್ರೆಸ್  ಪಕ್ಷಕ್ಕೆ ಬಹುಮತ ಬಂದರೆ ರಾಹುಲ್ ಗಾಂಧಿ ಖಂಡತವಾಗಿ ಪ್ರಧಾನಿಯಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ.
Stay up to date on all the latest ರಾಷ್ಟ್ರೀಯ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp