ಪ್ರಧಾನಿ ಕುರ್ಚಿ ಉಳಿಯುತ್ತೋ ಬಿಡುತ್ತೋ... ನಾನಿರಬೇಕು ಇಲ್ಲವೇ ಭಯೋತ್ಪಾದಕರು ಇರಬೇಕು: ಮೋದಿ ಶಪಥ!

ಭಯೋತ್ಪಾದನೆ ನಿರ್ಮೂಲನೆ ಮಾಡಿಯೇ ತೀರುವುದಾಗಿ ಶಪಥ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಒಂದೋ ನಾನಿರಬೇಕೌ ಇಲ್ಲವೇ ಭಯೋತ್ಪಾದಕರು ಇರಬೇಕು ಎಂದು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
ಅಹ್ಮದಾಬಾದ್: ಭಯೋತ್ಪಾದನೆ ನಿರ್ಮೂಲನೆ ಮಾಡಿಯೇ ತೀರುವುದಾಗಿ ಶಪಥ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಒಂದೋ ನಾನಿರಬೇಕೌ ಇಲ್ಲವೇ ಭಯೋತ್ಪಾದಕರು ಇರಬೇಕು ಎಂದು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. 
ಲೋಕಸಭಾ ಚುನಾವಣೆಗೆ ಏ.23 ರಂದು 3 ನೇ ಹಂತದ ಮತದಾನ ನಡೆಯಲಿದ್ದು, ಗುಜರಾತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಏ.21 ರಂದು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. 
ನನ್ನ ಪ್ರಧಾನಿ ಹುದ್ದೆ ಉಳಿಯುತ್ತದೆಯೋ ಇಲ್ಲವೋ. ಆದರೆ ಭಯೋತ್ಪಾದಕರಿರಬೇಕು ಅಥವಾ ನಾನು ಇರಬೇಕು ಎಂಬುದನ್ನು ನಾನು ನಿರ್ಧರಿಸಿಯಾಗಿದೆ ಎಂದು ಮೋದಿ ಜನತೆಗೆ ತಿಳಿಸಿದ್ದಾರೆ. 
ವಿಂಗ್ ಕಮಾಂಡರ್ ಅಭಿನಂದನ್ ಅವರು ಪಾಕಿಸ್ತಾನದಿಂದ ವಾಪಸ್ ಆದ ಪ್ರಕ್ರಿಯೆಯ ಬಗ್ಗೆಯೂ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, "ನಮ್ಮ ಪೈಲಟ್ ಗೆ ಏನಾದರೂ ಆದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದ್ದೆವು. ಅಭಿನಂದನ್ ಗೆ ಏನಾದರು ಆದಲ್ಲಿ ಮೋದಿ ನಮಗೆ ಹೀಗೆ ಮಾಡಿದರು ಎಂದು ಇಡೀ ಪ್ರಪಂಚದ ಮುಂದೆ ನೀವು ಹೇಳುತ್ತಲೇ ಇರಬೇಕು ಹಾಗೆ ಮಾಡುತ್ತೇವೆ ಎಂದು ನಾವು ಎಚ್ಚರಿಸಿದ್ದೆವು" ಎಂದು ಮೋದಿ ಹೇಳಿದ್ದಾರೆ. 
ಅಭಿನಂದನ್ ಪಾಕ್ ವಶದಲ್ಲಿದ್ದಾಗ ಮೋದಿ 12 ಕ್ಷಿಪಣಿಗಳನ್ನು ಸಿದ್ಧಗೊಳಿಸಿದ್ದರು. ಎರಡನೇ ದಿನಕ್ಕೇ ಪಾಕಿಸ್ತಾನ ಅಭಿನಂದನ್ ಬಿಡುಗಡೆಯನ್ನು ಘೋಷಿಸಿತ್ತು. ಇಲ್ಲವಾದಲ್ಲಿ ಆ ರಾತ್ರಿ "ರಕ್ತಪಾತದ ರಾತ್ರಿಯಾಗಿರುತ್ತಿತ್ತು" ಎಂದು ಅಮೆರಿಕದ ಹಿರಿಒಯ ಅಧಿಕಾರಿಗಳಲ್ಲೊಬ್ಬರು ಹೇಳಿದ್ದರು. ಇದನ್ನು ಹೇಳಿದ್ದು ಅಮೆರಿಕ, ಈಗ ಈ ಬಗ್ಗೆ ನಾನೇನು ಹೇಳುವುದಕ್ಕಿಲ್ಲ. ಸಮಯ ಬಂದಾಗ ನಾನು ಈ ಬಗ್ಗೆ ಮಾತನಾಡುತ್ತೇನೆ ಎಂದು ಮೋದಿ ಹೇಳಿದ್ದಾರೆ. 
ಇನ್ನು ಮೋದಿ ಮುಂದೇನು ಮಾಡುತ್ತಾರೆ ಎಂಬ ಬಗ್ಗೆ ಭಯವಾಗುತ್ತಿದೆ ಎಂಬ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿಕೆಗೂ ಮೋದಿ ಪ್ರತಿಕ್ರಿಯೆ ನೀಡಿದ್ದು, ಶರದ್ ಪವಾರ್ ಅವರು ಮೋದಿ ಮುಂದೇನು ಮಾಡುತ್ತಾರೆ ಎಗೊತ್ತಿಲ್ಲ ಎಂದು ಹೇಳುತ್ತಾರೆ. ಅವರಿಗೇ ನಾನೇನು ಮಾಡುತ್ತೇನೆಂಬುದು ಗೊತ್ತಿಲ್ಲ ಎಂದ ಮೇಲೆ ಇಮ್ರಾನ್ ಖಾನ್ ಗೆ ಹೇಗೆ ತಿಳಿಯುತ್ತದೆ ಎಂದು ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com