'ಚಂದ್ರಯಾನ–2' ಉಡಾವಣೆ ಜುಲೈಗೆ ಮುಂದೂಡಿದ ಇಸ್ರೋ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಬಹು ನಿರೀಕ್ಷಿತ 'ಚಂದ್ರಯಾನ–2'ಉಡಾವಣೆಯನ್ನು ಜುಲೈಗೆ ಮುಂದೂಡಲಾಗಿದೆ...
ಚಂದ್ರಯಾನ -1 ಉಡಾವಣೆಯ ಚಿತ್ರ(ಸಂಗ್ರಹ ಚಿತ್ರ)
ಚಂದ್ರಯಾನ -1 ಉಡಾವಣೆಯ ಚಿತ್ರ(ಸಂಗ್ರಹ ಚಿತ್ರ)
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಬಹು ನಿರೀಕ್ಷಿತ 'ಚಂದ್ರಯಾನ–2'ಉಡಾವಣೆಯನ್ನು ಜುಲೈಗೆ ಮುಂದೂಡಲಾಗಿದೆ ಎಂದು ಇಸ್ರೋ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಇಸ್ರೇಲ್ ಚಂದ್ರಯಾನ ವಿಫಲವಾದ ಹಿನ್ನಲೆಯಲ್ಲಿ ಚಂದ್ರನ ಅಂಗಳದಲ್ಲಿ ಲ್ಯಾಂಡರ್‌ ಮತ್ತು ರೋವರ್‌ ಇಳಿಸುವ 'ಚಂದ್ರಯಾನ–2' ಬಾಹ್ಯಾಕಾಶ ನೌಕೆಯ ಉಡಾವಣೆಯನ್ನು ಮುಂದೂಡಲಾಗಿದೆ.
ಇದೇ ತಿಂಗಳಲ್ಲಿ ನಡೆಯಬೇಕಿದ್ದ 'ಚಂದ್ರಯಾನ–2' ಉಡಾವಣೆಯನ್ನು ಜುಲೈಗೆ ಮುಂದೂಡಲಾಗಿದ್ದು, ನಾವು ಇಸ್ರೇಲ್ ವೈಫಲ್ಯವನ್ನು ನೋಡಿದ್ದೇವೆ. ಹೀಗಾಗಿ ನಾವು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ. ಇಸ್ರೇಲ್ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದರೂ ಅದರ ಚಂದ್ರಯಾನ ವಿಫಲವಾಗಿದೆ. ಆದರೆ ನಮ್ಮ ಚಂದ್ರಯಾನ ವಿಳಂಬವಾದರೂ ಯಶಸ್ವಿಯಾಗಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.
ವರದಿಗಳ ಪ್ರಕಾರ, ಭಾರತದ ಚಂದ್ರಯಾನ - 2 ಲ್ಯಾಂಡರ್ ಸ್ವಲ್ಪ ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ರೋವರ್‌ ಇಳಿಸಲಿರುವ ಇಸ್ರೋದ ಚಂದ್ರಯಾನ-2 ಏಪ್ರಿಲ್‌ನಲ್ಲಿ ಉಡಾವಣೆಯಾಗಲಿದೆ ಎಂದು ಫೆಬ್ರವರಿಯಲ್ಲಿ ಪ್ರಧಾನಿ ಸಚಿವಾಲಯದ ರಾಜ್ಯ ಸಚಿವ, ಬಾಹ್ಯಾಕಾಶ ವಿಭಾಗದ ಉಸ್ತುವಾರಿ ಜಿತೇಂದ್ರ ಸಿಂಗ್‌ ಕೂಡ ಹೇಳಿದ್ದರು. ಆದರೆ ಅದು ಏಪ್ರಿಲ್ ಗೆ ಮುಂದೂಡಿಕೆಯಾಗಿತ್ತು. ಈಗ ಮತ್ತೆ ಜುಲೈಗೆ ಮುಂದೂಡಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com